ಶುಕ್ರವಾರ, ಏಪ್ರಿಲ್ 23, 2021
28 °C

ಬಸವಣ್ಣ ಸಮಾನತೆ ಕರುಣಿಸಿದ ಮನುಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಸವಣ್ಣನವರು 12ನೇ ಶತಮಾನದಲ್ಲಿ ದಲಿತರನ್ನು ಅಪ್ಪಿಕೊಂಡ ಮಹಾ ಮಾನವತಾವಾದಿ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆ ಕರುಣಿಸಿದ ಮನುಷ್ಯ ಎಂದು ಸಂಜಯ್ ಮಾಕಲ್ ಹೇಳಿದರು.

 

ನಗರದ ಕೆ.ಇ.ಬಿ. ಎಂಜಿನಿಯರ್ಸ್‌ ಸಭಾಂಗಣದಲ್ಲಿ  ಶನಿವಾರ ಆಯೋಜಿಸಿದ್ದ `ಶರಣ ಸಂಗಮ~ ಸಮಾರಂಭದಲ್ಲಿ ಮಾತನಾಡಿದರು.12ನೇ ಶತಮಾನದಲ್ಲಿ ಶೋಷಣೆ, ಮೂಢನಂಬಿಕೆ, ಅಸಮಾನತೆ ತಾಂಡವವಾಡುತ್ತಿತ್ತು. ಬೇರೆ ಯಾವುದೇ  ದೇವರು ಶೋಷಣೆಗೊಳಗಾದ ಜನರನ್ನು ಕಾಪಾಡಲಿಲ್ಲ. ಇಂಥ ಸನ್ನಿವೇಶದಲ್ಲಿ ದೇವರಾಗಿ ಬಂದದ್ದು ಬಸವಣ್ಣ ಮತ್ತು ಇತರೆ ಶರಣರು ಎಂದು ಹೇಳಿದರು.ಶಿವಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮತ್ತು ಅವರು ಸ್ಥಾಪಿಸಿದ ಲಿಂಗಾಯಿತ ಧರ್ಮ ಅಪ್ಪಿಕೊಂಡು, ಒಪ್ಪಿಕೊಂಡು ಶೋಷಣೆಗೊಳಗಾದವರು ಬದುಕು ಸಾಗಿಸಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಕೆಲವರು ಶರಣ ಸಾಹಿತ್ಯ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳವಲ್ಲಿ ವಿಫಲರಾಗಿದ್ದಾರೆ. ಲಿಂಗಾಯಿತ ಮತ್ತು ಶೂದ್ರರ ನಡುವಿನ ಸಂಬಂಧದ ಕೊಂಡಿ ಸಡಿಲವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

 

ಲಿಂಗಾಯತ ಮತ್ತು ಶೂದ್ರರ ನಡುವೆ ಪ್ರೇಮ ಹುಟ್ಟಿಕೊಳ್ಳಬೇಕಾಗಿದೆ. ಮತ್ತೊಂದು ಚಳವಳಿಯ ಮೂಲಕ ದಾರಿ ತಪ್ಪುತ್ತಿರುವ ಜನರನ್ನು ತಿದ್ದುವ ದೊಡ್ಡ ಜವಾಬ್ದಾರಿಯಿದೆ ಎಂದು ಹೇಳಿದರು.ಪುರಾಣ, ವೇದ, ಆಗಮಗಳನ್ನು ಪಠಣ ಮಾಡಿ, ದೇವಸ್ಥಾನಗಳ ಅರ್ಚಕರಾಗಿ ಕೆಲಸ ಮಾಡುವುದು ಕಾಯಕವಲ್ಲ. ಶ್ರಮವಹಿಸಿ ದುಡಿಯುವುದು, ಪರಿಶುದ್ಧ ಸಮಾಜದ ನಿರ್ಮಾಣಕ್ಕಾಗಿ ಸದಾ ಶ್ರಮಿಸುವುದು ನಿಜವಾದ ಕಾಯಕ ಎಂದು ಹೇಳಿದರು.ಸತ್ಕಾರ: ಕೃಷಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ. ಬಾಬುರಾವ ಮುಡಬಿ ಅವರನ್ನು ಸತ್ಕರಿಸಲಾಯಿತು. ಹಿರೇಮಠ ಸಂಸ್ಥಾನ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶಿವಶರಣಪ್ಪ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.ವಿಲಾಸವತಿ ಖೂಬಾ, ಸುಭಾಷ ವಾಲಿ, ನಾಗಣ್ಣ ಶಿರಸಗಿಕರ್, ಮಾಜಿ ಸಚಿವ ಜಿ. ರಾಮಕೃಷ್ಣ, ಮಹಾದೇವಪ್ಪ ದಳಪತಿ, ಚಂದ್ರಿಕಾ ಪರಮೇಶ್ವರಿ, ವೈಜನಾಥ ರಾಜೋಳ, ಮಲ್ಲಣ್ಣ ನಾಗರಾಳ ಅತಿಥಿಗಳಾಗಿದ್ದರು. ಮಾಣಿಕ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸಾಲಿ ವಚನಗಾಯನ ನಡೆಸಿಕೊಟ್ಟರು. ಸಿದ್ದರಾಮಪ್ಪ ಬಾಲಪ್ಪಗೋಳ ನಿರೂಪಿಸಿದರು. ಸಂಬಣ್ಣಾ ಹೊಳಕುಂದಾ ಸ್ವಾಗತಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.