ತಾಪಂ ಕಚೇರಿ ಎದುರು ರೈತರ ಧರಣಿ

ಬುಧವಾರ, ಜೂಲೈ 17, 2019
30 °C

ತಾಪಂ ಕಚೇರಿ ಎದುರು ರೈತರ ಧರಣಿ

Published:
Updated:

ಜೇವರ್ಗಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದ ಕೃಷಿ-ಕೂಲಿಕಾರರಿಗೆ ಸಂಬಳ ವಿತರಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿಯು, ಕೃಷಿ-ಕೂಲಿಕಾರರನ್ನು ಸೇರಿಸಿಕೊಂಡು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಸೋಮವಾರದಿಂದ ಅನಿರ್ದಿಷ್ಟ ಧರಣಿ ಪ್ರಾರಂಭಿಸಿದೆ.`ಜಮೀನು ಹೊಂದಿದ ರೈತರಿಗೆ ಹೊಸ ಬೆಳೆ ಸಾಲ ನೀಡಬೇಕು. ಪ್ರತಿ ಎಕರೆಗೆ 25ಸಾವಿರ ಬೆಳೆ ಸಾಲ ನೀಡಬೇಕು. 1ಲಕ್ಷರೂ ವರೆಗೆ ಯಾವುದೇ ಅಡವು ಇಲ್ಲದೇ ರೈತರಿಗೆ ಸರಳ ರೀತಿಯಲ್ಲಿ ಸಾಲ ಕೊಡಬೇಕು. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇನ್ನೊಂದು ಪಹಣಿ ಕೇಂದ್ರವನ್ನು ತೆರೆಯಬೇಕು~ ಎಂದು ಸಂಘವು ಆಗ್ರಹಿಸಿದೆ.`ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಬಾಕಿ ಇರುವ ಎಲ್ಲ ಕೂಲಿಯನ್ನು ಕೊಡಬೇಕು. ನಿವೇಶನಕ್ಕಾಗಿ ಅರ್ಜಿ ಹಾಕಿದ ಎಲ್ಲ ಅರ್ಹ ಬಡವರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು. 2011-12ನೇ ಸಾಲಿನಲ್ಲಿ ಬಿತ್ತನೆ ಮಾಡಿದ ಹಿಂಗಾರಿ ಮತ್ತು ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಮಂಜೂರು ಮಾಡಬೇಕು. ಎಲ್ಲಾ ರೈತರಿಗೆ ಉದ್ಯೋಗ ಖಾತರಿ ಯೋಜನೆಯ ಲಾಭ ದೊರೆಯುವಂತೆ ನೋಡಿಕೊಳ್ಳಬೇಕು~ ಎಂದು ಪ್ರಾಂತ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪ್ರಮುಖ  ಏಳು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಸೋಮವಾರವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿರುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ಸುಭಾಷ ಹೊಸಮನಿ ತಿಳಿಸಿದ್ದಾರೆ.ಧರಣಿಯಲ್ಲಿ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿದ್ಧರಾಮ ಹರವಾಳ, ಹಿರಿಯ ರೈತ ಮುಖಂಡ ವೆಂಕೋಬರಾವ್ ವಾಗಣಗೇರಿ, ಮಹಾದೇವ ನಡುವಿನಕೇರಿ, ದೇವಿಂದ್ರ ಮಡ್ನಾಳ, ಬಸಯ್ಯ ಹಿರೇಮಠ, ಶಂಕರಲಿಂಗ ಘೂಳ್ನೂರ, ಶಿವರಾಜ ದೇಸಾಯಿ, ಚನ್ನಬಸ್ಸಪ್ಪ ಸೊಪ್ಪಣ್ಣ, ಮುರಹರಿ ದಾಸರ, ಮಲ್ಕಪ್ಪ ಮ್ಯಾಗೇರಿ, ಉಸ್ಮಾನ್ ಅಲಿ ಮುಜಾವರ್, ವಿಠಲ್ ಎಸ್.ಹಟ್ಟಿ, ಸಿದ್ಧರಾಮ ಹೂಗಾರ, ಪರಮಾನಂದ ಬಮ್ಮನಳ್ಳಿ ಸೇರಿದಂತೆ ನೂರಾರು ಕೂಲಿಕಾರರು, ಮಹಿಳೆಯರು ಪಾಲ್ಗೊಂಡ್ದ್ದಿದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry