ಮನಸೂರೆಗೊಂಡ ಚಿಗುರು ನೃತ್ಯ

ಗುರುವಾರ , ಜೂಲೈ 18, 2019
28 °C

ಮನಸೂರೆಗೊಂಡ ಚಿಗುರು ನೃತ್ಯ

Published:
Updated:

ಸೇಡಂ: ಗುಲ್ಬರ್ಗದ ನಾಟ್ಯಾಂಜಲಿ ಕಲಾ ತಂಡವು ಪಟ್ಟಣದ ಮಾತೃಛಾಯಾ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ `ಚಿಗುರು~ ಜಾನಪದ ನೃತ್ಯ ಪ್ರದರ್ಶನ ಏರ್ಪಡಿಸಿದ್ದು ಅದು ನೋಡುಗರ ಮನಗೆದ್ದಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುಲ್ಬರ್ಗ ಹಾಗೂ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಹಕಾರದಲ್ಲಿ ವಿದ್ಯಾರ್ಥಿನಿ ಪ್ರಣೀತಾ ಭಟ್ ಮತ್ತು ಸಂಗಡಿಗರ ನೃತ್ಯ ಪ್ರದರ್ಶನ ನೀಡಿದರು.

ನಿರಾಭರಣ ಸುಂದರನಾದ ಶಿವನ ಪಾತ್ರದ ವಿದ್ಯಾಶ್ರೀ ನೃತ್ಯಕ್ಕೆ ಲಾಸ್ಯದ ಮೆರುಗು ನೀಡಿದ ಶಕ್ತಿ ಸ್ವರೂಪಿ ಹರ್ಷಿತಾ ಜೊತೆಗೆ ನರ್ತಕಿಯರಾಗಿ ಅಂಕಿತಾ ಮತ್ತು ಅನಿತಾ ಪಾಲ್ಗೊಂಡರು. ಭರತನಾಟ್ಯದಲ್ಲಿ `ಅಲಾರಿಪು~ ಎಂದರೆ ಅರಳುವುದು. ಈ ನೃತ್ಯದಲ್ಲಿ ಮಕ್ಕಳು ಅಂಗಾಂಗಗಳ ಕ್ರಮಬದ್ಧ  ಜೋಡಣೆಯಲ್ಲಿ ಸಂಪ್ರಿತಾ, ಪುನೀತಾ, ಸುಚೇತಾ ಹೆಜ್ಜೆಗಳು ಎಲ್ಲರ ಗಮನ ಸೆಳೆದವು. ಲೋಕದ ಜನತೆಯ ಸನ್ಮಾರ್ಗದ ಬೋಧನೆ ನೀಡಿದವರು ಅನೇಕ ವಚನಕಾರರು. ನುಡಿದರೆ ಮಾತು ಮಾಣಿಕ್ಯದಂತಿರಬೇಕು, ನುಡಿದರೆ ಸಜ್ಜನರ ಮಾತು ಕೂಡಲಸಂಗಮ ಮೆಚ್ಚುವಂತಿರಬೇಕು ಎಂದು ಮಕ್ಕಳು ತಮ್ಮ ವಚನ ನೃತ್ಯದಲ್ಲಿ ಬಸವಣ್ಣನವರು ಮನಕುಲಕ್ಕೆ ಸಾರಿದ್ದನ್ನು ಪ್ರದರ್ಶಿಸಿ ತೋರಿಸಿದರು.ಹಾವ, ಭಾವ ಮತ್ತು ಅಭಿನಯದೊಂದಿಗೆ ಕ್ರಮಬದ್ಧ ಲಯದೊಂದಿಗೆ ಕೂಡಿದ ನೃತ್ಯದಲ್ಲಿ ಮುಕುಂದ ಬಾಲನ ಮಾಯಾ ಜಾಲದ ವರ್ಣನೆ `ಗೋವರ್ಧನ ಗಿರಿಯಾದರಿ~ ಪ್ರಸ್ತುತಪಡಿಸಲಾಯಿತು. ಮಳೆಗಾಲದ ವೈಶಿಷ್ಟ್ಯ ತಿಳಿಸುವ `ಮಾಯದಂಥ ಮಳೆ ಬಂತಣ್ಣ~ ನೃತ್ಯ ನೋಡುಗರ ಕರತಾಡನ ಪಡೆಯುವಲ್ಲಿ ಯಶಸ್ವಿಯಾದರು.

ಕಲಾ ತಂಡದ ಮುಖ್ಯಸ್ಥೆ ಸಂಧ್ಯಾ ಭಟ್ ನಿರೂಪಿಸಿದರು. ಸಂಚಾಲಕ ಪುರಂದರ ಭಟ್ ಸ್ವಾಗತಿಸಿದರು. ಬಸವರಾಜ ಮಳಗಿ ಉದ್ಘಾಟಿಸಿದರು. ಚನ್ನಬಸ್ಸಪ್ಪ ಗವಿ ಪ್ರಾಸ್ತಾವಿಕ ಮಾತನಾಡಿದರು. ರಾಮಚಂದ್ರ ಜೋಶಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry