ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್ಬಾಲ್‌: ಮುಂಬೈ ಸಿಟಿಗೆ ಐಎಸ್‌ಎಲ್‌ ಕಿರೀಟ

ಫೈನಲ್‌ನಲ್ಲಿ ಬಾಗನ್ ವಿರುದ್ಧ 3–1 ಜಯ
Published 4 ಮೇ 2024, 22:39 IST
Last Updated 4 ಮೇ 2024, 22:39 IST
ಅಕ್ಷರ ಗಾತ್ರ

ಕೋಲ್ಕತ್ತ: ಛಲದ ಆಟವಾಡಿದ ಮುಂಬೈ ಸಿಟಿ ಎಫ್‌ಸಿ ತಂಡ ಹಿನ್ನಡೆಯಿಂದ ಚೇತರಿಸಿಕೊಡು 3–1 ಗೋಲುಗಳಿಂದ ಮೋಹನ್ ಬಾಗನ್ ಮೇಲೆ ಜಯಗಳಿಸಿ ಇಂಡಿಯನ್ ಸೂಪರ್‌ ಲೀಗ್‌ ಪ್ರಶಸ್ತಿಯನ್ನು ಎರಡನೇ ಬಾರಿಗೆ ಮುಡಿಗೇರಿಸಿಕೊಂಡಿತು. ಬಿಪಿನ್‌ ಸಿಂಗ್ ಅವರು ಮತ್ತೊಮ್ಮೆ ಬಾಗನ್ ತಂಡವನ್ನು ಕಾಡಿದರು.

ಮಧ್ಯಂತರಕ್ಕೆ ಒಂದು ನಿಮಿಷ ಇರುವಾಗ ಜೇಸನ್‌ ಕಮಿಂಗ್ಸ್‌ ಗೋಲು ಹೊಡೆದು ಬಾಗನ್‌ಗೆ ಮುನ್ನಡೆ ಒದಗಿಸಿದಾಗ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ತಂಡವನ್ನು ಹುರಿದುಂಬಿಸಲು ಸೇರಿದ್ದ 62,000 ಪ್ರೇಕ್ಷಕರ ಸಂಭ್ರಮ ಮುಗಿಲುಮುಟ್ಟಿತ್ತು.

ಆದರೆ ಹೋರಾಟ ಬಿಡದ ಮುಂಬೈ 53ನೇ ನಿಮಿಷ ಸಮಮಾಡಿಕೊಂಡಿತು. ಆಲ್ಬರ್ಟೊ ನೊಗೆರಾ ಅವರ ಚಿತ್ತಾಕರ್ಷಕ ಪಾಸ್‌ನಲ್ಲಿ  ಜಾರ್ಗೆ ಪೆರೆವ್ರಾ ಡಯಾಝ್ ಮೂಲಕ ಗೋಲು ಹೊಡೆದಾಗ ಗ್ಯಾಲರಿಯಲ್ಲಿ ಮೌನ ಆವರಿಸಿತು. 

ಬದಲಿ ಆಟಗಾರನಾಗಿ ಆಟಕ್ಕಿಳಿದ ಬಿಪಿನ್ 81ನೇ ನಿಮಿಷ ನಿರ್ಣಾಯಕ ಗೋಲು ಹೊಡೆದು ಮುಂಬೈಗೆ 2–1 ಮುನ್ನಡೆ ಒದಗಿಸಿದರು. ಇಂಜುರಿ ಅವಧಿಯಲ್ಲಿ (90+7) ಮತ್ತೊಬ್ಬ ಸಬ್‌ಸ್ಟಿಟ್ಯೂಟ್‌ ಜಾಕೋಬ್ ವೊಯ್ಟಸ್‌ ಅವರು ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಈ ಹಿಂದೆ ಮುಂಬೈ ಚೊಚ್ಚಲ ಐಎಸ್‌ಎಲ್‌ ಪ್ರಶಸ್ತಿ ಗೆದ್ದುಕೊಂಡ ಸಂದರ್ಭದಲ್ಲಿ ಬಿಪಿನ್‌ ಅವರು 90ನೇ ನಿಮಿಷ ನಿರ್ಣಾಯಕ ಗೋಲು ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT