ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ಇಲ್ಲಿ ನಡೆಯಲಿದೆ. ಹತ್ತು ಫ್ರಾಂಚೈಸಿಗಳ ಪರ್ಸ್ನಲ್ಲಿ ಒಟ್ಟು ₹237.55 ಕೋಟಿ ಹಣವಿದ್ದು, ಅದರಲ್ಲಿ 77 ಆಟಗಾರರ ಖರೀದಿಗೆ ಕಸರತ್ತು ನಡೆಸಲಿವೆ.

ಮೂರು ಬಾರಿಯ ಪ್ರಶಸ್ತಿ ವಿಜೇತ ಕೋಲ್ಕತ್ತ ನೈಟ್ ರೈಡರ್ಸ್ (₹64.30) ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (₹43.40) ಫ್ರಾಂಚೈಸಿಗಳ ಥೈಲಿಯಲ್ಲಿ ಅತ್ಯಧಿಕ ಮೊತ್ತವಿದ್ದು, ತಾರಾ ಆಟಗಾರರ ಮೇಲೆ ಕಣ್ಣಿಟ್ಟಿವೆ.

ಕೋಲ್ಕತ್ತ ಫ್ರಾಂಚೈಸಿಯು 13 ಆಟಗಾರರನ್ನು ಆಯ್ಕೆ ಮಾಡಿ, ತಂಡವನ್ನು ಬಲಿಷ್ಠವಾಗಿ ಸಜ್ಜುಗೊಳಿಸುವ ಗುರಿ ಹೊಂದಿದೆ. ಆ ಫ್ರಾಂಚೈಸಿಗೆ ಸೂಪರ್ ಕಿಂಗ್ಸ್ ಮಾತ್ರ ಸವಾಲು ಹಾಕಬಹುದು. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪರ್ಸ್ನಲ್ಲಿ ಕೇವಲ ₹2.75 ಕೋಟಿ ಮಾತ್ರ ಇದೆ. ಹೀಗಾಗಿ, ಬಿಡ್ನಲ್ಲಿ ಈ ತಂಡ ದೊಡ್ಡ ಪಾತ್ರ ವಹಿಸುವ ಸಾಧ್ಯತೆ ಕಡಿಮೆ.

ಕಳೆದ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಅವರು ಬಿಡ್ನಲ್ಲಿ ಅತಿ ಹೆಚ್ಚು ಮೌಲ್ಯ ಪಡೆಯುವ ನಿರೀಕ್ಷೆಯಿದೆ. ಅಲ್ಲದೆ, ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್, ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್ರಂತಹ ಆಟಗಾರರನ್ನು ತೆಕ್ಕೆಗೆ ಪಡೆಯಲು ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ವೇಗದ ಬೌಲಿಂಗ್ ಆಲ್ರೌಂಡರ್ಗಳು ಸಾಮಾನ್ಯವಾಗಿ ಐಪಿಎಲ್ ಬಿಡ್ನಲ್ಲಿ ಹೆಚ್ಚಿನ ಮೌಲ್ಯ ಪಡೆಯುತ್ತಾರೆ. ಆದ್ದರಿಂದ ಮೂಲಬೆಲೆ ತಲಾ ₹2 ಕೋಟಿ ಹೊಂದಿರುವ ಗ್ರೀನ್, ಅಯ್ಯರ್ ಅವರೊಂದಿಗೆ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಅವರು ಈ ಬಾರಿ ಬಿಡ್ಡಿಂಗ್ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಐಪಿಎಲ್ ಅಂಕಿಅಂಶಗಳನ್ನು ನೋಡಿದರೆ 26 ವರ್ಷದ ಗ್ರೀನ್ ಅವರು 29 ಪಂದ್ಯಗಳಲ್ಲಿ 704 ರನ್ ಮತ್ತು 16 ವಿಕೆಟ್ಗಳನ್ನು ಪಡೆದಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತಿರುವ ಈ ಆಟಗಾರ ಬಿಡ್ನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಕಳೆದ ವರ್ಷ ಮೆಗಾ ಹರಾಜಿನಲ್ಲಿ ₹23.75 ಕೋಟಿ ಮೊತ್ತಕ್ಕೆ ಕೋಲ್ಕತ್ತ ತಂಡದ ಪಾಲಾಗಿದ್ದ ವೆಂಕಟೇಶ್ ಅಯ್ಯರ್ ನಿರಾಸೆ ಮೂಡಿಸಿದ್ದರು. ವೆಸ್ಟ್ ಇಂಡೀಸ್ನ ಆ್ಯಂಡ್ರೆ ರಸೆಲ್ ಅವರನ್ನೂ ಬಿಡುಗಡೆ ಮಾಡಿರುವುದರಿಂದ ಕೋಲ್ಕತ್ತ ತಂಡಕ್ಕೆ ಕನಿಷ್ಠ ಇಬ್ಬರು ಅಗ್ರ ಕ್ರಮಾಂಕದ ಬ್ಯಾಟರ್ಗಳು ಮತ್ತು ಒಬ್ಬ ಆಲ್ರೌಂಡರ್ ಅಗತ್ಯವಿದೆ.

ಗರಿಷ್ಠ ಮಿತಿ ₹18 ಲಕ್ಷ:

ಗ್ರೀನ್ ಅವರಿಗೆ ತಮ್ಮದೇ ದೇಶದ ವೇಗಿ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಬೆಲೆ ಪಡೆಯುವ ವಿದೇಶಿ ಆಟಗಾರನಾಗುವ ಅವಕಾಶ ಇದೆ. ಆದರೆ, ಹರಾಜಿನಲ್ಲಿ ಅವರ ಮೌಲ್ಯ ₹25 ಕೋಟಿ ತಲುಪಿದರೂ, ಹಾಲಿ ಋತುವಿನಲ್ಲಿ ಅವರ ವೇತನ ₹18 ಕೋಟಿ ಆಗಿರುತ್ತದೆ.

ಐಪಿಎಲ್ನ ‘ಗರಿಷ್ಠ ಶುಲ್ಕ’ ನಿಯಮದ ಪ್ರಕಾರ ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರನ ಗರಿಷ್ಠ ಮೊತ್ತ ₹18 ಕೋಟಿಯಾಗಿದೆ. ಕಳೆದ ವರ್ಷ ಮೆಗಾ ಹರಾಜಿನಲ್ಲಿ ₹27 ಕೋಟಿ ಪಡೆದಿದ್ದ ರಿಷಬ್ ಪಂತ್ ಅವರು ಐಪಿಎಲ್ ಇತಿಹಾಸದಲ್ಲಿ ಈವರೆಗಿನ ದುಬಾರಿ ಆಟಗಾರ ಎನಿಸಿದ್ದಾರೆ.

ಮಿನಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಲು ಅವಕಾಶವಿರುವುದಿಲ್ಲ. ಹಾಗಾಗಿ, ಕೋಲ್ಕತ್ತ ಫ್ರಾಂಚೈಸಿ ವೆಂಕಟೇಶ್ ಅವರನ್ನು ಮರಳಿ ಪಡೆಯಲು ಬಯಸಿದರೆ ಬಿಡ್ಡಿಂಗ್ ವೇಳೆಯೇ ಪೈಪೋಟಿ ನಡೆಸಬೇಕಾಗುತ್ತದೆ.

ಇಂಗ್ಲೆಂಡ್ನ ಲಿವಿಂಗ್ಸ್ಟೋನ್ ಅಲ್ಲದೇ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರೂ ಉತ್ತಮ ಮೊತ್ತ ಪಡೆಯುವ ಸಾಧ್ಯತೆ ಇದೆ.

ಹೊಸ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಮುಕುಲ್ ಚೌಧರಿ ಫ್ರಾಂಚೈಸಿಗಳನ್ನು ಆಕರ್ಷಿಸಲಿದ್ದಾರೆ. ಕಡಿಮೆ ಮೂಲಬೆಲೆ ಹೊಂದಿರುವ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್ (ತಲಾ ₹75 ಲಕ್ಷ) ಅವರಿಗೂ ‘ಕೋಟಿಪತಿ’ಗಳಾಗುವ ಅವಕಾಶವಿದೆ.

ಆಟಗಾರರ ಬಿಡ್ ಪ್ರಕ್ರಿಯೆಗೆ 1,390 ಆಟಗಾರರು ನೋಂದಾಯಿಸಿದ್ದರು. ನಂತರ ಅದು 1005ಕ್ಕೆ ಇಳಿಯಿತು. ಅಂತಿಮ ಪಟ್ಟಿಯಲ್ಲಿ 350 ಆಟಗಾರರು ಉಳಿದಿದ್ದಾರೆ.

ಅಣಕು ಹರಾಜು: ಗ್ರೀನ್ಗೆ ₹30 ಕೋಟಿ!

ಬೆಂಗಳೂರು: ಮಿನಿ ಹರಾಜಿಗೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್ನ ಅಧಿಕೃತ ಪ್ರಸಾರಕ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಅಣಕು ಹರಾಜನ್ನು ನಡೆಸಿತು. ಭಾರತ ತಂಡದ ಕೆಲ ಮಾಜಿ ಆಟಗಾರರು ಭಾಗವಹಿಸಿದ್ದರು. ಈ ವೇಳೆ ಕ್ಯಾಮರಾನ್ ಗ್ರೀನ್, ಸರ್ಫರಾಜ್ ಖಾನ್ ಭಾರೀ ಮೊತ್ತ ಪಡೆದರು.

ಗ್ರೀನ್ ಅವರನ್ನು ₹30.5 ಕೋಟಿ ಮೊತ್ತಕ್ಕೆ ಕೋಲ್ಕತ್ತ ತಂಡವು ಆಯ್ಕೆ ಮಾಡಿತು. ಕೋಲ್ಕತ್ತ ತಂಡದ ಪರ ರಾಬಿನ್ ಉತ್ತಪ್ಪ ಅವರು ಗ್ರೀನ್ಗಾಗಿ ಬಿಡ್ ಮಾಡಿದರು.

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಅಣಕು ಹರಾಜಿನಲ್ಲಿ ಆಯ್ಕೆ ಮಾಡಿತು. ಚೆನ್ನೈ ತಂಡವನ್ನು ಸುರೇಶ್ ರೈನಾ ಪ್ರತಿನಿಧಿಸಿ ₹7 ಕೋಟಿಗೆ ಖರೀದಿಸಿದರು.

ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ₹19 ಕೋಟಿಗೆ ಲಖನೌ ತಂಡ ತೆಕ್ಕೆಗೆ ಹಾಕಿಕೊಂಡಿತು. ಇರ್ಫಾನ್ ಪಠಾಣ್ ಲಖನೌ ತಂಡದ ಪರ ಬಿಡ್ ಮಾಡಿದರು.

₹ 2 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು

ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯಿ (ಭಾರತ); ಕ್ಯಾಮರಾನ್ ಗ್ರೀನ್, ಜೇಕ್ ಫ್ರೆಸರ್ ಮೆಕ್ಗುರ್ಕ್, ಸ್ಟೀವ್ ಸ್ಮಿತ್, ಸೀನ್ ಅಬಾಟ್, ಜೋಶ್ ಇಂಗ್ಲಿಸ್, ಕೂಪರ್ ಕಾನೋಲಿ (ಆಸ್ಟ್ರೇಲಿಯಾ); ಲಿಯಾಮ್ ಲಿವಿಂಗ್ಸ್ಟೋನ್, ಬೆನ್ ಡಕೆಟ್, ಜೆಮಿ ಸ್ಮಿತ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಲಿಯಾಮ್ ಡಾಸನ್, ಟಾಮ್ ಕರನ್, ಡೇನಿಯಲ್ ಲಾರೆನ್ಸ್ (ಇಂಗ್ಲೆಂಡ್); ಡೆವೊನ್ ಕಾನ್ವೆ, ಜೆಕಬ್ ಡಫಿ, ಮೈಕೆಲ್ ಬ್ರೇಸ್ವೆಲ್, ಡೇರಿಲ್ ಮಿಚೆಲ್, ಕೈಲ್ ಜೆಮೀಸನ್, ವಿಲಿಯಂ ಓರೂರ್ಕಿ, ಆ್ಯಡಂ ಮಿಲ್ನೆ (ನ್ಯೂಜಿಲೆಂಡ್), ಲುಂಗಿ ಎನ್ಗಿಡಿ, ಗೆರಾಲ್ಡ್ ಕೋಯಿಜಿ, ಎನ್ರಿಚ್ ನಾಕಿಯಾ, ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ), ವನಿಂದು ಹಸರಂಗ, ಮಥೀಷ ಪಥಿರಾಣ, ಮಹೀಷ್ ತೀಕ್ಷಣ (ಶ್ರೀಲಂಕಾ); ಅಕೇಲ್ ಹುಸೇನ್, ಶಾಯಿ ಹೋಪ್, ಅಲ್ಜರಿ ಜೋಸೆಫ್, ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್ (ಅಫ್ಗಾನಿಸ್ತಾನ); ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ)

ಯಾರ ಪರ್ಸ್ನಲ್ಲಿ ಎಷ್ಟು ಹಣ?

ತಂಡ;ಪರ್ಸ್ ಮೌಲ್ಯ(₹ ಕೋಟಿ)

ಕೋಲ್ಕತ್ತ ನೈಟ್ರೈಡರ್ಸ್; 64.30

ಚೆನ್ನೈ ಸೂಪರ್ ಕಿಂಗ್ಸ್;43.40

ಸನ್ರೈಸರ್ಸ್ ಹೈದರಾಬಾದ್; 25.50

ಲಖನೌ ಸೂಪರ್ ಜೈಂಟ್ಸ್; 22.95

ಡೆಲ್ಲಿ ಕ್ಯಾಪಿಟಲ್ಸ್; 21.80

ರಾಯಲ್ ಚಾಲೆಂಜರ್ಸ್ ಬೆಂಗಳೂರು; 16.40

ರಾಜಸ್ಥಾನ ರಾಯಲ್ಸ್;16.05

ಗುಜರಾತ್ ಟೈಟನ್ಸ್;12.90

ಪಂಜಾಬ್ ಕಿಂಗ್ಸ್;11.50

ಮುಂಬೈ ಇಂಡಿಯನ್ಸ್;2.75

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.