ಶನಿವಾರ, ಏಪ್ರಿಲ್ 17, 2021
30 °C

ಅಪ್‌ಡೇಟ್ ಆಗದ ಅಂತರ್ಜಾಲ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಸ್ಥಾಯಿ ಸಮಿತಿ ಆಯ್ಕೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ಬುಧವಾರ ಅನುಮೋದನೆಯೂ ದೊರಕಿದೆ. ನೂತನ ಸದಸ್ಯರಿಗೆ ಗ್ರಾಮಸ್ಥರಿಂದ, ಸದಸ್ಯೆಯರಿಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಸನ್ಮಾನವೂ ಆಗಿದೆ.ಸದಸ್ಯರು ಹೊಸ ಹುಮ್ಮಸ್ಸಿನಿಂದ ತಮ್ಮ ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ತಲ್ಲೆನರಾಗಿದ್ದಾರೆ. ಹೌದು ಇದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಎಲ್ಲವೂ ಸಾಮಾನ್ಯವಾಗಿಯೇ ಸಾಗಿದೆ. ಆದರೆ ಎಚ್ಚೆತ್ತುಕೊಳ್ಳದ ಸಂಸ್ಥೆಯೊಂದಿದೆ. ಅದು ಅಂತರ್ಜಾಲ ಮಾಹಿತಿ ತಾಣ. ಈವರೆಗೂ ಗುಲ್ಬರ್ಗ ಜಿಲ್ಲಾಡಳಿತದ ಅಂತರ್ಜಾಲ ತಾಣದಲ್ಲಿ ನೂತನ ಸದಸ್ಯರ ವಿಳಾಸ, ಸಂಪರ್ಕ ಸಂಖ್ಯೆಯ ಮಾಹಿತಿ ನೀಡದೇ ಇರುವುದು. ಈ ವಿಳಂಬ ಧೋರಣೆಗೆ ಕಾರಣವೇನು?ಒಂದೆರಡು ವಾರಗಳಾದರೆ ತಾಂತ್ರಿಕ ತೊಂದರೆ ಅಥವಾ ಮಾಹಿತಿ ಸಂಗ್ರಹಕ್ಕೆ ಸಮಯಾವಕಾಶ ಬೇಕು ಎಂಬ ನೆಪಗಳನ್ನಾದರೂ ನಂಬ ಬಹುದಾಗಿತ್ತು. ಆದರೆ ಎರಡು ತಿಂಗಳುಗಳೇ ಕಳೆದರೂ ಅಲ್ಲಿ ಅಧ್ಯಕ್ಷರ ಸ್ಥಾನವನ್ನು ಯಲ್ಲಪ್ಪ ಭೀಮಣ್ಣ ಅವರೇ ಅಲಂಕರಿಸಿದ್ದಾರೆ. ಉಪಾಧ್ಯಕ್ಷರ ಸ್ಥಾನದಲ್ಲಿ ರಾಜಾ ಹನುಮಪ್ಪ ನಾಯಕ ಅವರ ಹೆಸರು ರಾರಾಜಿಸುತ್ತಿದೆ.ಉಳಿದಂತೆ ಅದೇ ಹಳೆಯ ಕ್ಷೇತ್ರಗಳು, ಹಳೆಯ ಸದಸ್ಯರು ಮತ್ತವರ ಮಾಹಿತಿಯನ್ನು ಮಾತ್ರ ಪ್ರಾಮಾಣಿಕವಾಗಿ ಒದಗಿಸುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮೈಕೊಡವಿಕೊಂಡು ಎಚ್ಚೆತ್ತುಕೊಳ್ಳುವುದೇ? ಇದು ನಾಗರಿಕರ ಪ್ರಶ್ನೆ.ಉರ್ದು ಶಾಲೆಗೆ ಆದ್ಯತೆ ನೀಡಲು ಆಗ್ರಹ


ಅಫಜಲಪುರ ತಾಲ್ಲೂಕಿನ ಕರಜಗಿ ಹಾಗೂ ಮಣ್ಣೂರು ತಾಲ್ಲೂಕಿನ ಉರ್ದು ಮಾಧ್ಯಮದ ಶಾಲೆಗೆ ಈವರೆಗೂ ಬೆಂಚ್ ಪೂರೈಕೆಯಾಗಿಲ್ಲ. ಕನ್ನಡ ಮಾಧ್ಯಮದ ಶಾಲೆಗೆ ಆಗಿದೆ. ಕನ್ನಡ ಮಾಧ್ಯಮದ ಬದಲು ಮೊದಲ ಆದ್ಯತೆ ಉರ್ದು ಶಾಲೆಗೆ ನೀಡಬೇಕು. ಅಲ್ಲಿಯೂ ಬೆಂಚ್ ಪೂರೈಸಬೇಕು ಎಂದು ಮತೀನ್ ಪಟೇಲ್ ಆಗ್ರಹಿಸಿದರು.ಇದಲ್ಲದೆ ಎರಡೂ ಶಾಲೆಗಳಿಗೆ ಒಬ್ಬರೇ ಮುಖ್ಯಸ್ಥರಿದ್ದಾರೆ. ಅದರ ಬದಲು ಉರ್ದು ಶಾಲೆಯನ್ನು ಆಡಳಿತದಿಂದ ಬೇರ್ಪಡಿಸಬೇಕು. ಸದ್ಯಕ್ಕೆ ಪಾಳಿ ಆಧಾರದ ಮೇಲೆ ತರಗತಿಗಳು ನಡೆಯುತ್ತಿವೆ. ಅದರ ಬದಲು ಶಾಲಾ ಕಟ್ಟಡಕ್ಕೆ ನಿವೇಶನವನ್ನು ದೇಣಿಗೆಯಾಗಿ ನೀಡಲಾಗುತ್ತದೆ. ಶಾಲೆಯನ್ನು ಕನ್ನಡ ಮಾಧ್ಯಮದಿಂದ ಬೇರ್ಪಡಿಸಬೇಕು ಎಂದು ಆಗ್ರಹಿಸಿದರು.ಇದಕ್ಕೆ ಪ್ರತಿಯಾಗಿ ಶಿಕ್ಷಣ ಇಲಾಖೆಯ ಡಿಡಿಪಿಐ ಪರಮೇಶ್ವರ್ ಅವರು ಈ ಶಾಲೆಗೆ ಒಂದೇ ಮುಖ್ಯಸ್ಥರ ಹುದ್ದೆ ಇದೆ. ಇದನ್ನು ಬದಲಿಸಲಾಗದು ಎಂದು ಸ್ಪಷ್ಟಪಡಿಸಿದರು. ಆದರೆ ಸದಸ್ಯರ ಉರ್ದುಗೆ ಆದ್ಯತೆ ನೀಡಬೇಕು ಎಂಬ ಮಾತಿಗೆ ಸಹಮತಿ ತೋರಿದ ಸದಸ್ಯರು, ಕನ್ನಡಕ್ಕೆ ಒತ್ತು ನೀಡಬೇಡಿ ಎಂದಾಗ ಅಸಮಾಧಾನ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.