ಭಾನುವಾರ, ಏಪ್ರಿಲ್ 18, 2021
31 °C

ಸಂಘಟನೆ ಸರ್ಕಾರ ಎಚ್ಚರಿಸುವ ಕೆಲಸ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವ್ಯಕ್ತಿ ಪ್ರತಿಷ್ಠೆ ಕಾಣದೆ ಸಾಮಾಜಿಕ ಪರಿಶ್ರಮ ಕಾಣುವಂತ ಕೆಲಸ ಆದಲ್ಲಿ ಮಾತ್ರ ಸಮಾಜ ಅವರನ್ನು ಉಳಿಸಿ, ಬೆಳೆಸುವುದಲ್ಲದೆ ಅವರನ್ನು ಸ್ಮರಿಸುವ ಕೆಲಸ ಮಾಡುತ್ತದೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿ ಹೇಳಿದರು.ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಈಚೆಗೆ ಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅರುಣಕುಮಾರ್ ಎಸ್. ಪಾಟೀಲ್‌ರ 43ನೇ ಹುಟ್ಟುಹಬ್ಬ ಹಾಗೂ ಬಸವ ತತ್ವ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.

ರಾಜ್ಯ ಸೇರಿದಂತೆ ಜಿಲ್ಲೆಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸರ್ಕಾರಕ್ಕೆ ಹೋರಾಟಗಳ ಮೂಲಕ ಎಚ್ಚರಿಸುವಂತಹ ಶಕ್ತಿ ಸಂಘಟನೆಗಳಲ್ಲಿ ಬೆಳೆಯಲಿ ಎಂದು ಅವರು ತಿಳಿಸಿದರು.ದಾವಣಗೆರೆ ಹರಿಹರ ಪಂಚಮಸಾಲಿ ಪೀಠದ ಸಿದ್ದಲಿಂಗ ಮಹಾಸ್ವಾಮಿ ನೇತೃತ್ವ ವಹಿಸಿದ್ದರು. ಬೀದರ್ ಕೌಠಾ(ಬಿ) ಬೆಲ್ದಾಳ ಬಸವಶ್ರೀ ಸಿದ್ಧರಾಮ ಶರಣರು ಅಧ್ಯಕ್ಷತೆ ವಹಿಸಿದ್ದರು. ಸುಲಫಲ ಮಠದ ಮಹಾಂತ ಶಿವಾಚಾರ್ಯರು, ಗುಲ್ಬರ್ಗ ವಿ.ವಿ. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ, ಎಚ್.ಕೆ.ಸಿ.ಸಿ.ಐ. ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಶಿವಶರಣಪ್ಪ ಸೀರಿ, ರಾಜಶೇಖರ ಕಣಕಿ, ಡಾ. ಎಸ್.ಎಚ್. ಕಟ್ಟಿ, ಶಂಕರರಾವ ಪಾಟೀಲ್ ಇದ್ದರು.

ಜೈಕರವೇ ಸಂಸ್ಥಾಪಕ  ಅರುಣಕುಮಾರ ಎಸ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜೈಕರವೇ ತತ್ವ ಸಿದ್ಧಾಂತದ ಕೈಪಿಡಿ ಹಾಗೂ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.

ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಎಸ್.ಜಿ. ಭಾರತಿ, ಹಿರಿಯ ಪತ್ರಕರ್ತ ಕಾಂತಾಚಾರ್ಯ ಮಣ್ಣೂರ, ಪತ್ರಕರ್ತ ಡಾ. ಶಿವರಾಯ ಅಸುಂಡಿ, ಸಾಮಾಜಿಕ ಕಾರ್ಯಕರ್ತ ನರಸಿಂಹಾಚಾರ್ಯ ಅಕಮಂಚಿ ಮಣೂರ ಮತ್ತು ಜಸ್ವಿಕಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜೈಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪಟ್ಟಣಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.