ದಿನ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು
Published 15 ಜನವರಿ 2026, 1:01 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಅನ್ಯರ ಸಹಾಯ, ಸಹಕಾರವೆಂಬುವುದು ಈ ದಿನ ಇಲ್ಲವಾಗುವುದು.
ವೃಷಭ
ಅವಶ್ಯಕತೆಗಿಂತ ಹೆಚ್ಚಾಗಿ ಹಣ ವ್ಯಯವಾಗುವುದು. ಮದುವೆ ವಿಷಯದಲ್ಲಿ ಮನೆಯವರಿಂದ ಒತ್ತಡ ಬರಲಿದೆ. ಕುಟುಂಬದಲ್ಲಿ ನಿಮ್ಮ ನಿಲುವುಗಳೇನು ಎಂಬುದನ್ನು ಸ್ಪಷ್ಟ ಪಡಿಸಬೇಕಾಗುವುದು
ಮಿಥುನ
ವಿವೇಚನೆಯಿಂದ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಬಾಕಿ ಉಳಿದ ಕೆಲಸ ಪೂರ್ತಿಗೊಳಿಸಲು ಪ್ರಶಸ್ತವಾಗಿದೆ. ಧ್ಯಾನ ಹಾಗೂ ಯೋಗದ ಅಭ್ಯಾಸದಿಂದ ಅನುಕೂಲ
ಕರ್ಕಾಟಕ
ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು. ಹೆದರುವ ಅವಶ್ಯಕತೆ ಇಲ್ಲ. ಹಾಲಿನ ಉತ್ಪನ್ನಗಳ ಮಾರಾಟಗಾರರಿಗೆ ಲಾಭ ಬರುವುದು. ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು.
ಸಿಂಹ
ವಿರೋಧಿಗಳ ಅಥವಾ ಸಂಬಂಧಿಕರ ಟೀಕೆಗಳಿಗೆ ಕಿವಿಯೊಡ್ಡಿದರೆ ಉಪಯೋಗವಾಗುವುದಿಲ್ಲ, ಕೇವಲ ಸಮಯ ಹಾಳಾಗುವುದು ಎಂದು ತಿಳಿದಿರಲಿ. ಸಾಮಾಜಿಕ ಗಲಭೆಯಿಂದ ದೂರವಿರಿ
ಕನ್ಯಾ
ಹೊಸ ಮನೆಯ ಅಥವಾ ನಿವೇಶನದ ದಾಖಲೆ ಕೆಲಸಗಳಿಗಾಗಿ ಓಡಾಟ ನಡೆಸ ಬೇಕಾಗುವುದು. ರಾಜಕೀಯ ರಂಗದಲ್ಲಿ ಬಹಳ ದಿನಗಳ ನಂತರ ಯಶಸ್ಸು ದೊರೆಯಲಿದೆ
ತುಲಾ
ಸಿಹಿ ತಿಂಡಿ ತಯಾರಕರಿಗೆ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ ಇದೆ. ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿದರೆ, ಬಯಕೆ ಈಡೇರುವುದು. ಶ್ರೀರಾಮ ನಾಮ ಸ್ಮರಣೆ ಮಾಡಿ.
ವೃಶ್ಚಿಕ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಹಗುರಾಗುವಿರಿ. ಜೀವನಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಧನು
ಹಿರಿಯರಲ್ಲಿ ಮುಖ್ಯವಾದ ವಿಚಾರ ಮಾತನಾಡುವಾಗ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸದೆ ಮನದ ಭಾವನೆಯನ್ನು ಸ್ಪಷ್ಟವಾಗಿ ತೆರೆದಿಡಿ. ಬಂಧುಗಳ ಆಗಮನ ಸಂತಸ ತರಲಿದೆ.
ಮಕರ
ಹಳೆಯ ಸ್ನೇಹಿತನೊಬ್ಬನ ಆಕಸ್ಮಿಕ ಭೇಟಿ ಸಂತಸ ತರಲಿದೆ. ಆರೋಗ್ಯ ಸುಧಾರಿಸಿ ಎಂದಿನಂತೆ ಕೆಲಸಕ್ಕೆ ತೆರಳುವಂತಾಗುತ್ತದೆ. ತೊಂದರೆಗಳನ್ನು ಎದುರಿಸುವಾಗ ಧೈರ್ಯಗೆಡದಿರಿ.
ಕುಂಭ
ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗುವ ಪ್ರಸಂಗ ಬಂದರೂ ಧೈರ್ಯದಿಂದ ಎದುರಿಸಿ. ನಿಮ್ಮ ಕಾರ್ಯದೊತ್ತಡದಲ್ಲಿ ಮನೆಯ ವಿಚಾರಗಳತ್ತ ಗಮನಹರಿಸುವುದು ಮುಖ್ಯವಾಗುವುದು
ಮೀನ
ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳಬಹುದು. ನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಧೈರ್ಯವಿರಲಿ. ಕೆಲಸಗಳು ನಿಧಾನವಾಗಿ ಸಾಗಲಿವೆ.