ಬಹುದಿನದ ಬೇಡಿಕೆ ಈಡೇರಿಕೆ: ಕಾಂಗ್ರೆಸ್ ಸಂತಸ
ಚಿಂಚೋಳಿ: ಕೇಂದ್ರ ಸರ್ಕಾರದ ರಾಜಕೀಯ ವ್ಯವಹಾರಗಳ ಸಂಪುಟ ಉಪ ಸಮಿತಿ ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತರಲು ಸಮ್ಮತಿಸಿ ಹಸಿರು ನಿಶಾನೆ ತೋರಿಸಿದ್ದರಿಂದ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಪೇಡಾ ಹಂಚಿ ವಿಜಯೋತ್ಸವ ಆಚರಿಸಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಬಡಿ ದರ್ಗಾದ ಸಜ್ಜಾದ ಅಕ್ಬರ್ ಹುಸೇನಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಹೈದರಾಬಾದ ಕರ್ನಾಟಕ ಪ್ರದೇಶದ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಮುಂದೆ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿ, ಡಾ. ಮನಮೋಹನಸಿಂಗ್ ಸರ್ಕಾರವನ್ನು ಅಭಿನಂದಿಸಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್, ಉಪಾಧ್ಯಕ್ಷ ಶರಣಗೌಡ ಸುಂಕದ್, ವಕೀಲ ಲಕ್ಷ್ಮಣ ಆವುಂಟಿ, ಆರ್, ಗಣಪತರಾವ್, ಶಿವಕುಮಾರ ಕೊಳ್ಳೂರು, ಕೆ.ಎಂ ಹಾಷ್ಮೀ, ವಿಠಲ್ ಚವ್ಹಾಣ್, ಮಲ್ಕಪ್ಪ ಬೀರಾಪುರ, ಶ್ರೀನಿವಾಸ ಚಿಂಚೋಳಿಕರ್, ಪ್ರಕಾಶ ಬೋವಿ, ಮತೀನ್ ಸೌದಾಗಾರ, ಸಂಜೀವಕುಮಾರ ಪಾಟೀಲ ಚಂದ್ರಶೇಖರ ಪಾಟೀಲ ದೇಗಲಮಡಿ, ಮಲ್ಲಿಕಾರ್ಜುನ ಭೂಶೆಟ್ಟಿ, ಅಯ್ಯುಬ್ಖಾನ್ ಮುಂತಾದವರು ಪಾಲ್ಗೊಂಡಿದ್ದರು.
ಕೊಂಚಾವರಂ ವರದಿ: ಆಂಧ್ರದ ಗಡಿಗೆ ಹೊಂದಿಕೊಂಡ ರಾಜ್ಯದ ಗಡಿ ಭಾಗ ಕೊಂಚಾವರಂ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು 371 ತಿದ್ದುಪಡಿಗೆ ಕೇಂದ್ರ ಸರ್ಕಾರ ಸಾಂಕೇತಿಕ ಒಪ್ಪಿಗೆ ಸೂಚಿಸಿದ್ದರಿಂದ ತಾಲ್ಲೂಕು ಪಂಚಾಯಿತಿ ಪ್ರತಿಪಕ್ಷ ನಾಯಕ ನರಸಿಮ್ಲು ಕುಂಬಾರ್ ನೇತೃತ್ವದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು.
ಮುಖಂಡರಾದ ನರಸಿಮ್ಲು ಸವಾರಿ, ಗೋಪಾಲ ದಳಪತಿ, ಯಾದಗಿರಿ ನಾಯಕೋಡಿ, ಅಂಬೇಡ್ಕರ್ ಯುವಜನ ಸಂಘದ ಅಧ್ಯಕ್ಷ ಸುಭಾಷ್, ಶಂಕರ ವಿಭೂತಿ, ನರಸಿಂಹಾರೆಡ್ಡಿ ಪೆಂಟಪ್ಪ ತೋಕಲ್ ಮುಂತಾದವರು ಪಟಾಕಿ ಸಿಡಿಸಿ ಸಿಹಿ ವಿನಿಮಯ ಮಾಡಿಕೊಂಡು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್ ಪರ ಜಯಘೋಷಗಳನ್ನು ಮೊಳಗಿಸಿ ವಿಜಯೋತ್ಸವ ಆಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ: ಚಿಂಚೋಳಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಅಧ್ಯಕ್ಷ ಸಂಜೀವಕುಮಾರ ಪಾಟೀಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.