ಮೌಂಟ್‌ ಎವರೆಸ್ಟ್‌ನಿಂದ 11 ಟನ್‌ ತ್ಯಾಜ್ಯ ಸಂಗ್ರಹ

ಶುಕ್ರವಾರ, ಜೂನ್ 21, 2019
24 °C
ನಾಲ್ಕು ಶವಗಳ ಪತ್ತೆ

ಮೌಂಟ್‌ ಎವರೆಸ್ಟ್‌ನಿಂದ 11 ಟನ್‌ ತ್ಯಾಜ್ಯ ಸಂಗ್ರಹ

Published:
Updated:
Prajavani

ಕಠ್ಮಂಡು (ಪಿಟಿಐ): ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಕೈಗೊಂಡಿರುವ ಎರಡು ತಿಂಗಳ ಸ್ವಚ್ಛತಾ ಕಾರ್ಯದಲ್ಲಿ 11 ಟನ್‌ ತ್ಯಾಜ್ಯ ಮತ್ತು ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ.

ನೇಪಾಳ ಸರ್ಕಾರ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು. ಆಮ್ಲಜನಕ ಸಿಲಿಂಡರ್‌ಗಳು, ಪ್ಲಾಸ್ಟಿಕ್‌ ಬಾಟಲ್‌ಗಳು, ಕ್ಯಾನ್‌ಗಳು, ಬ್ಯಾಟರಿಗಳು ಈ ತ್ಯಾಜ್ಯದಲ್ಲಿ ಸೇರಿದ್ದವು. ಎವರೆಸ್ಟ್‌ ಶಿಬಿರದಿಂದ ಈ ಎಲ್ಲ ತ್ಯಾಜ್ಯವನ್ನು ಸೇನೆಯ ಹೆಲಿಕಾಪ್ಟರ್‌ಗಳಲ್ಲಿ ಕಠ್ಮಂಡುಗೆ ಕಳುಹಿಸಲಾಯಿತು.

ಕೆಲ ತ್ಯಾಜ್ಯವನ್ನು ಸರ್ಕಾರೇತರ ಸಂಸ್ಥೆ ‘ಬ್ಲೂ ವೇಸ್ಟ್‌ ಟು ವ್ಯಾಲ್ಯು’ಗೆ ನೀಡಲಾಯಿತು. ಈ ಸಂಸ್ಥೆಯು ತ್ಯಾಜ್ಯವನ್ನು ಮರುಬಳಕೆ ಮಾಡುತ್ತದೆ.

ಏಪ್ರಿಲ್‌ 14ರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಮುಂದಿನ ವರ್ಷವೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ನೇಪಾಳ ಸೇನೆಯ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದ ನಿರ್ದೇಶಕ ಬಿಗ್ಯಾನ್‌ ದೇವ್‌ ಪಾಂಡೆ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !