ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌: 12 ರನ್‌ಗೆ ಮಂಗೋಲಿಯಾ ಆಲೌಟ್

Published 8 ಮೇ 2024, 16:09 IST
Last Updated 8 ಮೇ 2024, 16:09 IST
ಅಕ್ಷರ ಗಾತ್ರ

ಸಾನೊ (ಜಪಾನ್): ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಏಳು ತಿಂಗಳ ನಂತರ, ಮಂಗೋಲಿಯಾ ತಂಡ ಬುಧವಾರ ಇಲ್ಲಿ ನಡೆದ ಆತಿಥೇಯ ಜಪಾನ್ ವಿರುದ್ಧದ ಟಿ20 ಪಂದ್ಯದಲ್ಲಿ 12 ರನ್‌ಗಳಿಗೆ ಆಲೌಟ್ ಆಯಿತು. ಚುಟುಕು ಕ್ರಿಕೆಟ್‌ನಲ್ಲಿ ಎರಡನೇ ತಂಡ ಗಳಿಸಿದ ಕನಿಷ್ಠ ಮೊತ್ತ ಇದು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ 7 ವಿಕೆಟ್‌ಗೆ 217 ರನ್‌ ಗಳಿಸಿತು. ಈ ಗುರಿ ಬೆನ್ನತ್ತಿದ ಮಂಗೋಲಿಯಾ 8.2 ಓವರ್‌ಗಳಲ್ಲಿ 10 ರನ್‌ ಗಳಿಸುವಷ್ಟರಲ್ಲೇ ಎಲ್ಲಾ ವಿಕೆಟ್ ಕಳೆದುಕೊಂಡಿತು. ಆರು ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರು.

2023ರ ಫೆಬ್ರುರವರಿ 26ರಂದು ಸ್ಪೇನ್ ವಿರುದ್ಧ ಐಲ್ ಆಫ್ ಮ್ಯಾನ್ ದ್ವೀಪದ ತಂಡ ಕೇವಲ 10 ರನ್‌ಗಳಿಗೆ ಆಲೌಟ್ ಆಗಿದ್ದು ಕನಿಷ್ಠ ಮೊತ್ತದ ದಾಖಲೆಯಾಗಿದೆ.

ಜಪಾನ್ ಪರ 17 ವರ್ಷದ ಎಡಗೈ ವೇಗಿ ಕಜುಮಾ ಕಟೋ ಸ್ಟಾಫರ್ಡ್ 3.2 ಓವರ್‌ಗಳಲ್ಲಿ 7 ರನ್‌ಗೆ 5 ವಿಕೆಟ್ ಪಡೆದರೆ, ಅಬ್ದುಲ್ ಸಮದ್ ಮತ್ತು ಮಕೊಟೊ ತನಿಯಾಮಾ ತಲಾ ಎರಡು ವಿಕೆಟ್ ಪಡೆದರು.

ಮಂಗೋಲಿಯಾ ಪರ ತುರ್ ಸುಮಯಾ (11 ಎಸೆತಗಳಲ್ಲಿ 4 ರನ್) ಗರಿಷ್ಠ ರನ್ ಗಳಿಸಿದರೆ, ಆರಂಭಿಕ ಆಟಗಾರ ಬ್ಯಾಟ್ ಯಾಲ್ಟ್ ನಾಮ್ಸರಾಯ್ ಗರಿಷ್ಠ 12 ಎಸೆತಗಳನ್ನು ಎದುರಿಸಿ 2 ರನ್‌ ಗಳಿಸಿದರು. 

ಇದು ಮಂಗೋಲಿಯಾ ತಂಡದ ಐದನೇ ಟಿ20 ಪಂದ್ಯವಾಗಿದ್ದು, ಹಾಂಗ್‌ಝೌನಲ್ಲಿ ಏಷ್ಯಾ ಕ್ರೀಡಾಕೂಟದಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿತು. ಅಲ್ಲಿ ಎರಡೂ ಪಂದ್ಯಗಳನ್ನು ಸೋತ ನಂತರ ಗುಂಪು ಹಂತದಿಂದ ನಿರ್ಗಮಿಸಿತ್ತು.

ಸಂಕ್ಷಿಪ್ತ ಸ್ಕೋರ್: ಜಪಾನ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 217 (ಸಬೌರೀಶ್ ರವಿಚಂದ್ರನ್ 69, ಜೊಲ್ಜಾವ್ಖ್ಲಾನ್ ಶುರೆಂಟ್ಸೆಟ್ಸೆಗ್ 32ಕ್ಕೆ3, ಲುವ್ಸಾನ್ಜುಂಡುಯಿ ಎರ್ಡೆನೆಬುಲ್ಗಾನ್ 61ಕ್ಕೆ2). ಮಂಗೋಲಿಯಾ 8.2 ಓವರ್‌ಗಳಲ್ಲಿ 12 ( ತುರ್ ಸುಮಯಾ 4, ಕಜುಮಾ ಕಟೋ-ಸ್ಟಾಫರ್ಡ್ 7ಕ್ಕೆ5, ಅಬ್ದುಲ್ ಸಮದ್ 4ಕ್ಕೆ2, ಮಕೊಟೊ ತನಿಯಾಮಾ 0ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT