ತಿರುವನಂತಪುರಂ: ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿದೆ. ಇದೀಗ ಕ್ಲೀನ್ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ.

ಅದರಿಂದಾಗಿ ಭಾನುವಾರ ಇಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಮತ್ತು 30ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲ್ಲುವ ಛಲದಲ್ಲಿ ಆತಿಥೇಯ ಬಳಗವಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಫೀಳ್ಡಿಂಗ್ನಲ್ಲಿ ಒಂದಿಷ್ಟು ಲೋಪಗಳನ್ನು ಎಸಗಿದ್ದ ಭಾರತದ ಆಟಗಾರ್ತಿಯರು ನಂತರದ ಪಂದ್ಯಗಳಲ್ಲ ಸುಧಾರಣೆ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿಯೂ ಪಾರಮ್ಯ ಮೆರೆದಿದ್ದಾರೆ. ಸರಣಿಯ ಯಾವುದೇ ಪಂದ್ಯದಲ್ಲಿಯೂ 14.4 ಓವರ್ಗಿಂತ ಹೆಚ್ಚು ಬ್ಯಾಟಿಂಗ್ ಮಾಡಿಯೇ ಇಲ್ಲ. ಮೂರಕ್ಕಿಂತ ಹೆಚ್ಚು ವಿಕೆಟ್ ಕೂಡ ಕಳೆದುಕೊಂಡಿಲ್ಲ. 129 ರನ್ಗಳ ಗರಿಷ್ಠ ಗುರಿಯನ್ನು ಎದುರಿಸಿ ಗೆದ್ದಿದೆ.

ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಎರಡು ಪಂದ್ಯಗಳಿಂದ ನಾಲ್ಕು ಹಾಗೂ ಮಧ್ಯಮವೇಗಿ ರೇಣುಕಾ ಸಿಂಗ್ ಅವರು ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳನ್ನು ಗಳಿಸಿದ್ದಾರೆ. ಕಳೆದೆಲ್ಲ ಪಂದ್ಯಗಳಲ್ಲಿಯೂ ಹರ್ಮನ್ಪ್ರೀತ್ ಕೌರ್ ಅವರು ಟಾಸ್ ಗೆದ್ದಿರುವುದು ಕೂಡ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಬೌಲರ್ಗಳು ತಮ್ಮ ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಲಂಕಾದ ಯಾವುದೇ ಬ್ಯಾಟರ್ ಕೂಡ ವೈಯಕ್ತಿಕವಾಗಿ 40ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಅರುಂಧತಿ ರೆಡ್ಡಿ ಆಡಿದ್ದರು. ನಂತರದ ಪಂದ್ಯದಲ್ಲಿ ರೇಣುಕಾ ಕಣಕ್ಕಿಳಿದು, ಅರುಂಧತಿ ವಿಶ್ರಾಂತಿ ಪಡೆದಿದ್ದರು. ಈ ಪ್ರಯೋಗವು ಫಲ ಕೊಟ್ಟಿದೆ.

ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಮತ್ತು ಮಧ್ಯಮಕ್ರಮಾಂಕದ ಜೆಮಿಮಾ ರಾಡ್ರಿಗಸ್ ಅವರು ತಲಾ ಒಂದು ಅರ್ಧಶತಕ ಗಳಿಸಿ ಉತ್ತಮ ಲಯದಲ್ಲಿದ್ದಾರೆ. ಎಡಗೈ ಬ್ಯಾಟರ್ ಸ್ಮೃತಿ ಮಂದಾನ ತಮ್ಮ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.

ಅನುಭವಿ ಆಟಗಾರ್ತಿ ಚಮರಿ ಅಟಪಟ್ಟು ನಾಯಕತ್ವದ ಲಂಕಾ ತಂಡದಿಂದ ಸರಣಿ ಗೆಲುವಿನ ಅವಕಾಶ ಕೈತಪ್ಪಿದೆ. ಆದರೆ ಸಮಾಧಾನಕರ ಗೆಲುವಿಗಾಗಿ ಪ್ರಯತ್ನಿಸಬೇಕು. ತಂಡದ ಪ್ರತಿಭಾನ್ವಿತ ಆಟಗಾರ್ತಿಯರಾದ ಹಾಸಿನಿ ಪೆರೆರಾ, ಕವಿಶಾ ದಿಲ್ಹರಿ ಮತ್ತು ಹರ್ಷಿತಾ ಸಮರವಿಕ್ರಮ ಅವರು ಪುಟಿದೆದ್ದರೆ ತಂಡದ ಬಲ ಹೆಚ್ಚಬಹುದು.

ಪಂದ್ಯ ಆರಂಭ: ರಾತ್ರಿ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.