ಬೆಂಗಳೂರು: ಸುಮನ್ ಮತ್ತು ರೋನಕ್ ಅವರ ಅಮೋಘ ಆಟದ ಬಲದಿಂದ ನ್ಯಾಷನಲ್ ಎಸ್.ಸಿ ಮೈಸೂರು ತಂಡವು ಕರ್ನಾಟಕ ಗ್ರಾಮೀಣ ಲೀಗ್ ಪುರುಷರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ 78–62ರಿಂದ ಚಿನ್ನದಾನಡು ಬಿ.ಸಿ. ಕೋಲಾರ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ ನ್ಯಾಷನಲ್ ತಂಡವು 33–35ರಿಂದ ಹಿನ್ನಡೆಯಲ್ಲಿತ್ತು. ಉತ್ತರಾರ್ಧದಲ್ಲಿ ಚುರುಕಿನ ಆಟದ ಮೂಲಕ ಗೆಲುವು ಸಾಧಿಸಿತು. ಸುಮನ್ ಮತ್ತು ರೋನಕ್ ಕ್ರಮವಾಗಿ 27 ಮತ್ತು 22 ಅಂಕ ಗಳಿಸಿದರು. ಕೋಲಾರ ತಂಡದ ಪರ ಹೇಮಂತ್ 20 ಅಂಕ ತಂದಿತ್ತರು.

ಇತರ ಪಂದ್ಯಗಳಲ್ಲಿ ಮಂಗಳೂರು ಬಿ.ಸಿ 58–34ರಿಂದ ಸಾಯ್ ಧಾರವಾಡ ವಿರುದ್ಧ; ಪ್ರೊಟೆಕ್ ಅಸೋಸಿಯೇಷನ್ ಮೈಸೂರು 76–59ರಿಂದ ಚಿನ್ನದಾನಡು ಬಿ.ಸಿ. ಕೋಲಾರ ಎದುರು; ಮರಿಯನ್ಸ್ ಬಿ.ಸಿ ಚಿಕ್ಕಮಗಳೂರು 67–43ರಿಂದ ಸಾಯ್ ಧಾರವಾಡ ವಿರುದ್ಧ ಗೆಲುವು ಸಾಧಿಸಿದವು. ಪ್ರಶಸ್ತಿ ಸುತ್ತಿನ ಹಣಾಹಣಿ ಶುಕ್ರವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.