ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL ಮಾದರಿಯಲ್ಲಿ BCL ಟೂರ್ನಿ ಅನಾವರಣ ಮಾಡಿದ ವೆಂಗ್‌ಸರ್ಕಾರ್, ವಾಲ್ಷ್, RP ಸಿಂಗ್

Published 8 ಮೇ 2024, 15:24 IST
Last Updated 8 ಮೇ 2024, 15:24 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಕ್ರಿಕೆಟಿಗರಾದ ಕೌರ್ಟ್ನಿ ವಾಲ್ಷ್, ದಿಲೀಪ್ ವೆಂಕ್‌ಸರ್ಕಾರ್ ಹಾಗೂ ಆರ್‌.ಪಿ ಸಿಂಗ್‌ ಅವರು ‘ಬಿಗ್‌ ಕ್ರಿಕೆಟ್ ಲೀಗ್‌ (ಬಿಸಿಎಲ್‌) ಎನ್ನುವ ಫ್ರಾಂಚೈಸಿ ಮಾದರಿಯ ಟಿ–20 ಕ್ರಿಕೆಟ್ ಲೀಗ್ ಅನ್ನು ಬುಧವಾರ ಲೋಕಾರ್ಪಣೆಗೊಳಿಸಿದರು.

ಆರ್‌.ಪಿ ಸಿಂಗ್‌ ಅವರ ಕಲ್ಪನೆಯಲ್ಲಿ ಇದಾಗಿದ್ದು, ಭಾರತದ 60 ಸ್ಥಳೀಯ ಆಟಗಾರರು, 48 ಅಂತರರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನ ಮಾಜಿ ಕ್ರಿಕೆಟಿಗರೊಂದಿಗೆ ಆಟವಾಡುವ ಅವಕಾಶ ಪಡೆಯಲಿದ್ದಾರೆ.

ಅವಾದ್ ಲಯನ್ಸ್, ಮುಂಬೈ ಮರೈನ್ಸ್‌, ರಾಜಸ್ಥಾನ್ ಕಿಂಗ್ಸ್‌, ಸದರ್ನ್ ಸ್ಪಾರ್ಥನ್ಸ್, ಬೆಂಗಾಲ್ ರೈನೋಸ್‌ ಹಾಗೂ ನದರ್ನ್ ಚಾಲೆಂಜರ್ಸ್‌ ಎನ್ನುವ 6 ಫ್ರಾಂಚೈಸಿಗಳು ಟೂರ್ನಿಯಲ್ಲಿ ಇರಲಿವೆ. ಉದ್ಘಾಟನಾ ಆವೃತ್ತಿಯಲ್ಲಿ 18 ಪಂದ್ಯಗಳು ನಡೆಯಲಿವೆ.

ವೆಂಗ್‌ಸರ್ಕಾರ್ ಹಾಗೂ ವಾಲ್ಷ್ ಈ ಕೂಟದ ಪಾಲುದಾರರಾಗಿದ್ದು, ಕ್ರಮವಾಗಿ ಲೀಗ್‌ ಆಯಕ್ತರು ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

‘ಹಲವು ಪ್ರತಿಭಾನ್ವಿತ ಕ್ರಿಕೆಟರ್‌ಗಳ ಕನಸು ಹಾಗೇ ಉಳಿಯುವುದನ್ನು ಕಂಡಿದ್ದೇನೆ. ಅಂಥ ಪ್ರತಿಭೆಗಳಿಗೆ ಬಿಸಿಎಲ್‌ ವೇದಿಕೆ ನೀಡಲಿದೆ’ ಎಂದು ಬಿಸಿಎಲ್‌ ಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ಆರ್‌.ಪಿ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT