ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ರೌಂಡರ್ ಆ್ಯಂಡ್ರೂ ಸೈಮಂಡ್ಸ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ಗೌರವ

Published 1 ಮೇ 2024, 15:30 IST
Last Updated 1 ಮೇ 2024, 15:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಎರಡು ವರ್ಷ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಆಲ್‌ರೌಂಡರ್ ಆ್ಯಂಡ್ರೂ ಸೈಮಂಡ್ಸ್‌ (46) ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ವಿಭಿನ್ನ ರೀತಿಯಲ್ಲಿ ಸ್ಮರಿಸಿತು. ಬುಧವಾರ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸುವಾಗ ಅವರ ಇಬ್ಬರು ಮಕ್ಕಳೂ ಗಣ್ಯ ಆಟಗಾರರ ಜೊತೆಯಾದರು.

ವಿಡಿಯೊ ಮೂಲಕ ತಂಡ ಪ್ರಕಟಿಸುವ ವೇಳೆ ಸೈಮಂಡ್ಸ್ ಮಗ ವಿಲ್ ಮತ್ತು ಮಗಳು ಕ್ಲೊ ಅವರು ಪಾಂಟಿಂಗ್‌, ಆ್ಯಡಂ ಗಿಲ್‌ಕ್ರಿಸ್ಟ್‌, ಮೈಕೆಲ್‌ ಕ್ಲಾರ್ಕ್ ಮತ್ತು ಗ್ಲೆನ್ ಮೆಕ್‌ಗ್ರಾತ್‌ಗೆ ಜೊತೆಯಾದರು.

ವಿಲ್‌ ಅವರು ಆ್ಯಷ್ಟನ್ ಅಗರ್ ಅವರ ಹೆಸರು ಹೇಳಿದರಲ್ಲದೇ, ಹೊಸ ನಾಯಕ ಮಿಚೆಲ್ ಮಾರ್ಷ್ ಬಗ್ಗೆ ಮಾತನಾಡಿದರು. 2003, 2007ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪಾಂಟಿಂಗ್ ಮಾರ್ಷ್ ಹೆಸರು ಪ್ರಕಟಿಸಿದರು. ಕ್ಲೊ ಅವರು ಮಿಚೆಲ್‌ ಸ್ಟಾರ್ಕ್ ಹೆಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT