ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ.ಎಲ್.ಆರ್.ಶಂಕರ್ ನಾಯ್ಕ್ ಅವರ ಬಳಿ ನಿಗದಿತ ಆಸ್ತಿಗಿಂತ ಹೆಚ್ಚುವರಿಯಾಗಿ ₹4.89 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಲೋಕಯುಕ್ತ ಪ್ರಕಟಣೆ ತಿಳಿಸಿದೆ.
.ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ– ವೇಗ ಪಡೆದ ಕೆಲಸ.
ಡಿಎಚ್ಒ ಅವರಿಗೆ ಸಂಬಂಧಿಸಿದ 4 ಕಡೆಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿತ್ತು. ಆಗ ₹4.20 ಕೋಟಿ ಮೌಲ್ಯದ 11 ನಿವೇಶನಗಳು, ಐದು ವಾಸದ ಮನೆಗಳು (ಸ್ಥಿರಾಸ್ತಿ) ಪತ್ತೆಯಾಗಿವೆ. ₹69.82 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇದರಲ್ಲಿ ₹15.56 ಲಕ್ಷ ನಗದು, ₹16.75 ಲಕ್ಷ ಮೌಲ್ಯದ ಚಿನ್ನಾಭರಣ, ₹9.60 ಲಕ್ಷ ಮೌಲ್ಯದ ವಾಹನಗಳು, ₹31.90 ಲಕ್ಷ ಮೌಲ್ಯದ ಪೀಠೋಪಕರಣ ಮತ್ತು ಇತರ ವಸ್ತುಗಳು ಸೇರಿವೆ ಎಂದು ತಿಳಿಸಲಾಗಿದೆ.

ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ ಸಚಿನ್, ಇನ್ಸ್ಪೆಕ್ಟರ್ಗಳಾದ ಅಮರೇಶ್, ರಾಜೇಶ್ ಲಮಾಣಿ ಮತ್ತು ಕೊಪ್ಪಳ, ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳಿಂದ ಮಂಗಳವಾರ ನಸುಕಿನಲ್ಲೇ ಶೋಧ ಕಾರ್ಯಾಚರಣೆ ಆರಂಭವಾಗಿತ್ತು. ಅದು ಸಂಜೆಯತನಕವೂ ಮುಂದುವರಿದಿತ್ತು.

ಅಕ್ರಮ ಅಸ್ತಿ ಸಂಪಾದನೆ ಕುರಿತಂತೆ ಡಿಎಚ್ಒ ವಿರುದ್ಧ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಹೊಸಪೇಟೆ: ಶಾಲೆಯಲ್ಲಿ ಕಂಡ ಶಾಂತಿಯ ಪಾಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.