ಜಾಗೃತಿ ಆಂದೋಲನ ಅನಿವಾರ್ಯ
ಗುಲ್ಬರ್ಗ: ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮೂಲ ನಿವಾಸಿಗಳ ಶೋಷಿತ ಜನಾಂಗ ದುಡಿಮೆಯ ಬದುಕಿನ ಜತೆ ಸಾಮಾಜಿಕ ಸ್ಥಾನಮಾನ ಪಡೆಯಬೇಕಾದರೆ, ಹೋರಾಟ ಹಾಗೂ ನಿರಂತರ ಜಾಗೃತಿ ಆಂದೋಲನ ಅನಿವಾರ್ಯ ಎಂದು ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಪ್ರಾಚಾರ್ಯ ಅಂಬಣ್ಣ ಜಿವಣಗಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಗುಲ್ಬರ್ಗ ಭಾರತ ಮುಕ್ತಿ ಮೋರ್ಚಾ ಜಿಲ್ಲಾ ಶಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಕೃಷಿಗೆ 1%, ಕೈಗಾರಿಕೆಗೆ 36% ಬಜೆಟ್ ನೀಡಿಯೇ ಆಜಾದಿ ಝೂಟಿ ಹೈ, ದೇಶ ಕಿ ಜನತಾ ಭೂಕಿ ಹೈ ನೈಜ ಸ್ವಾತಂತ್ರ್ಯ ನಮಗೆಷ್ಟು ಗೊತ್ತು? ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಭಾರತೀಯ ಬಾಮ್ಸೆಫ್ ಸಂಯೋಜಕ ಕುಮಾರ ಕಾಳೆ ಮಾತನಾಡಿ, ಸ್ವಾತಂತ್ರ್ಯದ ಇತಿಹಾಸ ಪುನರ್ ಪರಿಶೀಲಿಸಿದಾಗ, ದೇಶದ ಮೂಲ ನಿವಾಸಿಗಳಿಗೆ ನೈಜ ಸ್ವಾತಂತ್ರ್ಯ ಅರಿಯಲು ಸಾಧ್ಯ ಎಂದು, ಜನಾಂದೋಲನದ ಮೂಲಕ ಸಾಮಾಜಿಕ ನ್ಯಾಯ ಪಡೆಯಲು ಕರೆ ನೀಡಿದರು.
ಡಾ.ಎ.ಎಚ್.ಮುಕ್ದುಮ್ ಮಾತನಾಡಿದರು, ಬಾಮ್ಸೆಫ್ ರಾಜ್ಯ ಸಂಚಾಲಕ ಸುಭಾಷ ಶೀಲವಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಭು ಖಾನಾಪೂರೆ, ಮಹ್ಮದ್ ಉಲ್ ಗೋಟ್ರೆ, ನಾಗೇಶ ಎಂ.ಕೊಳ್ಳಿ, ಮಂಜುನಾಥ ಕೊಳ್ಳಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.