ಶನಿವಾರ, ಏಪ್ರಿಲ್ 17, 2021
31 °C

ವಾಡಿ: ಸಂಭ್ರಮದ ಈದ್-ಉಲ್-ಫಿತರ್‌ಗೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ರಂಜಾನ್ ದಿನಗಳಲ್ಲಿ ಸತತ ಒಂದು ತಿಂಗಳಿಂದ ಕಠಿಣವಾದ ಉಪವಾಸ ಮತ್ತು ದಿನದಲ್ಲಿ 5 ಬಾರಿ ನಮಾಜ್ ಮಾಡಿ ದೇಹ ದಂಡಿಸಿ, ಮನಸ್ಸು ಶುದ್ಧಿ ಮಾಡಿಕೊಂಡ ಮುಸ್ಲಿಂ ಬಾಂಧವರು ಸೋಮವಾರ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು, ನಮಾಜ್ ಮಾಡಿದರು. ನಂತರ ಸಾಮೂಹಿಕ ಪ್ರಾಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಹೇಳಿಕೊಂಡರು. ಆದರೆ ಸಾಮೂಹಿಕ ಪ್ರಾರ್ಥನೆಗೆ ತಡವಾಗಿ ಬಂದ  200 ಜನರಿಗೆ ಮಸೀದಿಯಲ್ಲಿ ನಮಾಜ್ ಮಾಡಿಸಲಾಯಿತು.ಚಿತ್ತಾಪುರ ಶಾಸಕ ವಾಲ್ಮೀಕ ನಾಯಕ, ಬಸೀರ್ ಖುರೇಷಿ, ಮುಕ್ತಾರ್ ಪಾನ್ ಶಾಪ್, ಮಹ್ಮದ್ ಇಸ್ಮಾಯಿಲ್, ಸಲ್ಮಾನ್ ಖಾನ್ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವಾಡಿ ಠಾಣಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಶ್ರೀಮಂತ್ ಇಲ್ಲಾಳ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.ಇಂಗಳಗಿ ವರದಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು ಭಾನುವಾರ ಸಂಜೆ ಚಂದ್ರ ದರ್ಶನವಾದ ಪರಿಣಾಮ ಸೋಮುವಾರ ಗ್ರಾಮದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾಥನೆ ಸಲ್ಲಿಸಿ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಜಾಮೀಯಾ ಮಸೀದಿ ಅಧ್ಯಕ್ಷ ಜಲೀಲ್ ಅಹ್ಮದ್ ದುದ್ದನಿ, ಬಸೀರ್ ಅಹ್ಮದ್ ದುದ್ದನಿ, ಶೇರಲಿ ದುದ್ದನಿ, ಹಾಜೀಕರಿಮ ಪಠಾಣ, ಮುಜಾಯಿದ್ ದುದ್ದನಿ, ದಾವುದ್ ಇಜೇರಿ, ಗೌಸ್ ದುದ್ದನಿ ಮತ್ತಿತರರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.