ನಾಪೋಕ್ಲು (ಕೊಡಗು ಜಿಲ್ಲೆ): ಕುಪ್ಪಂಡ (ಕೈಕೇರಿ), ನೆಲ್ಲಮಕ್ಕಡ, ಚೇನಂಡ ಹಾಗೂ ಕುಲ್ಲೇಟಿರ ತಂಡಗಳು ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಮುನ್ನಡೆದವು.

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ತಂಡದವರು ಸೋಮಯ್ಯ (3 ಗೋಲು), ಪ್ರಧಾನ್ ಹಾಗೂ ಜಗತ್ ಅವರ ಗೋಲುಗಳ ಬಲದಿಂದ ನೆರವಂಡ ವಿರುದ್ಧ 5–1 ಗೋಲುಗಳಿಂದ ಜಯ ಸಾಧಿಸಿದರು.

ನೆಲ್ಲಮಕ್ಕಡ ತಂಡವು ಪುದಿಯೊಕ್ಕಡ ತಂಡವನ್ನು 3–1 ಅಂತರದಿಂದ ಮಣಿಸಿತು. ನೆಲ್ಲಮಕ್ಕಡ ಪರವಾಗಿ ಸೋಮಯ್ಯ, ಆಶಿಕ್ ಹಾಗೂ ಎಂ.ಮೊಣ್ಣಪ್ಪ ತಲಾ ಒಂದು ಗೋಲು ಗಳಿಸಿ, ತಂಡದ ಗೆಲುವಿಗೆ ನೆರವಾದರು.

ಚೇನಂಡ ತಂಡವು ನಿಕಿನ್ (2) ಹಾಗೂ ಸೋನು ಪೊನ್ನಣ್ಣ (1) ಗಳಿಸಿದ ಗೋಲುಗಳಿಂದ ಬೊವ್ವೇರಿಯಂಡ ತಂಡದ ವಿರುದ್ಧ 3–1 ಅಂತರದಿಂದ ಗೆಲುವು ಪಡೆದರೆ, ಕುಲ್ಲೇಟಿರ ತಂಡವು ಚೆಪ್ಪುಡಿರ ತಂಡವನ್ನು 2–0ರಿಂದ ಮಣಿಸಿತು. ಕುಲ್ಲೇಟಿರ ಪರ ನಿಶ್ಚಲ್ ಹಾಗೂ ಅವಿನಾಶ್ ತಲಾ ಒಂದು ಗೋಲು ಗಳಿಸಿ, ಗೆಲುವಿಗೆ ಕಾರಣರಾದರು.

ಮತದಾನದ ಪ್ರಯುಕ್ತ ಶುಕ್ರವಾರ ಪಂದ್ಯಗಳು ನಡೆಯುವುದಿಲ್ಲ. ಏ. 27ರಂದು ಸೆಮಿಫೈನಲ್ ಮತ್ತು 28ರಂದು ಫೈನಲ್ ಪಂದ್ಯಗಳು ನಡೆಯಲಿದ್ದು, ಈವರೆಗೆ ಒಟ್ಟು 360 ತಂಡಗಳು ಟೂರ್ನಿಯಲ್ಲಿ ಭಾಗಿಯಾಗಿವೆ. 1,029 ಗೋಲುಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.