ಶನಿವಾರ, ಏಪ್ರಿಲ್ 17, 2021
31 °C

ಕಲಾ ವಿಷಯಗಳ ನಿರ್ಲಕ್ಷ್ಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಜ್ಞಾನ ಮತ್ತು ಕಲಾ ವಿಷಯಗಳಲ್ಲಿ ವ್ಯತ್ಯಾಸ ಇಲ್ಲ. ಎರಡು ವಿಷಯಗಳು ಸಮಾನವಾಗಿವೆ. ಆದ್ದರಿಂದ ಕಲಾ ವಿಷಯಗಳನ್ನು ನಿರ್ಲಕ್ಷ್ಯಿಸಬಾರದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಸಿ ನಾಗಯ್ಯ ತಿಳಿಸಿದರು.ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಂ.ಎ, ಎಂ.ಎಸ್ಸಿ, ಎಂಕಾಂ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಒಂದು ದಿನದ ಓರಿಯೆಂಟೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಗಣಿತಶಾಸ್ತ್ರ, ಅರ್ಥಶಾಸ್ತ್ರ ಹೀಗೆ ವಿವಿಧ ರೀತಿ ಕಲಾ ವಿಷಯಗಳು ಪ್ರಜಾತಂತ್ರ ವ್ಯವಸ್ಥೆಯ ಬುನಾದಿಗಳಾಗಿವೆ. ಆದ್ದರಿಂದ ಇಂಥ ವಿಷಯಗಳನ್ನು ನಿರ್ಲಕ್ಷ್ಯಿಸದೇ ಸರಿಯಾಗಿ ಅಧ್ಯಾಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.ಅಧ್ಯಕ್ಷೆತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲೆನೂರ ಗೀತಮಾಲಾ ಪ್ರತಿ ನಿಮಿಷಕ್ಕೆ ಮೌಲ್ಯವಿದೆ. ಆದ್ದರಿಂದ  ಕಾಲಹರಣ ಮಾಡದೇ ಸದಾ ಓದಿನಲ್ಲಿ ತೊಡಿಗಿಸಿಕೊಳ್ಳಿ. ಇಂಥ ಕಠಿಣ ಪರಿಶ್ರಮದಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುವದಕ್ಕೆ ಸಾಧ್ಯ ಎಂದು ತಿಳಿಸಿದರು.ಡಾ.್ಲಲೇಶ್ಲಪ್ಪ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಟಿ ಗುರುಬಸಪ್ಪ, ಡಾ.ಶಶಿಶೇಖರ ರೆಡ್ಡಿ, ಡಾ. ಶಾಂತಾ ಅಷ್ಟಿಗೆ ಮಾತನಾಡಿದರು.ಡಾ.ಶರದಾದೇವಿ ಜಾಧವ ಸ್ವಾಗತಿಸಿದರು. ಡಾ.ಸರ್ವೋದಯ ನಿರೂಪಿಸಿದರು. ಡಾ. ಅನಿಲಕುಮಾರ ಹಾಲು ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.