ಶುಕ್ರವಾರ, ಏಪ್ರಿಲ್ 23, 2021
22 °C

ಖಾಸಗಿ ವಾಹನಗಳಲ್ಲಿ ಟಾಪ್ ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಖಾಸಗಿ ಕ್ರೂಸರ್ ವಾಹನಗಳ ಟಾಪ್ ಮೇಲೆ ಕುಳಿತು ಜನರು ಪ್ರತಿದಿನ ಪ್ರಯಾಣಿಸುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.ಸರ್ಕಾರಿ ಬಸ್‌ಗಳ ಬೆಲೆ ಏರಿಕೆಯಿಂದ ಹೆಚ್ಚಿನ ಸಾರ್ವಜನಿಕರು ಎರಡು ರೂಪಾಯಿ  ಆಸೆಯಿಂದ ಹಾಗೂ ತ್ವರಿತವಾಗಿ ನಿಗದಿತ ಸ್ಥಳ ಸೇರುವ ಆಶಯದಿಂದ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಾರೆ.

ಗುಲ್ಬರ್ಗ ಗ್ರಾಮೀಣ ಪ್ರದೇಶದ ಹುಮನಾಬಾದ ರಿಂಗ್ ರಸ್ತೆಯಿಂದ ಕುರಿಕೋಟಾ ಸೇತುವೆವರೆಗೂ ಪ್ರತಿನಿತ್ಯ ವಾಹನಗಳು ಪೊಲೀಸರ ಎದುರಿನಲ್ಲಿಯೇ ಸಂಚರಿಸುತ್ತವೆ.ಇಂತಹ ಟಾಪ್ ಪಯಣದಿಂದ ಈ ಹೆದ್ದಾರಿಯಲ್ಲಿ ಹಲವಾರು ಅವಘಡಗಳು ಸಂಭವಿಸಿವೆ. ಆದರೂ ಸಾರ್ವಜನಿಕರು ಟಾಪ್ ಮೇಲೆ ಕುಳಿತು ಸಂಚರಿಸುವುದು ತಪ್ಪಿಲ್ಲ. ಪ್ರತಿದಿನ ಸ್ಥಳೀಯರಿಗೆ ಕುರಿಕೋಟಾ ಸೇತುವೆಯ ತೊಂದರೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಟಾಪ್ ಮೇಲೆ ಪ್ರಯಾಣ ಮಾಡುತ್ತಿದ್ದಾರೆ.ಸಂಜೆ 7ರಿಂದ ತಡರಾತ್ರಿಯವರೆಗೂ ಎಲ್ಲ ಕ್ರೂಸರ್‌ಗಳಲ್ಲಿ 30ಕ್ಕೂ ಹೆಚ್ಚು ಜನರು ಮೇಲೆ- ಕೆಳಗೆ ಕುಳಿತು ಪ್ರಯಾಣಿಸುತ್ತಾರೆ.ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಿಸಿ ಸಾರ್ವಜನಿಕರ ಸಮಸ್ಯೆ ಪರಿಹರಿಸಿ ಸುಗಮ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.