ಮಂಗಳವಾರ, ಏಪ್ರಿಲ್ 13, 2021
31 °C

ಶಿಕ್ಷಣಕ್ಕೆ ಸಮುದಾಯದ ಪಾಲುಗಾರಿಕೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: `ಮಕ್ಕಳ ಶಿಕ್ಷಣ ಹಕ್ಕು ಒದಗಿಸುವಲ್ಲಿ ಸರ್ಕಾರ ಮಾಡಿರುವ ಪ್ರಯತ್ನಗಳು ಸಾಕಾರಗೊಳ್ಳಲು ಶಾಲೆಯೊಂದಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯ~ ಎಂದು ಶಾಸಕ ಸುಭಾಷ ಆರ್. ಗುತ್ತೇದಾರ ಪ್ರತಿಪಾದಿಸಿದ್ದಾರೆ.ತಾಲ್ಲೂಕಿನ ಜವಳಿ (ಡಿ) ಗ್ರಾಮದಲ್ಲಿ ಸೋಮವಾರ ಆರ್‌ಐಡಿಎಫ್ ಮತ್ತು ಎಸ್‌ಡಿಎಫ್ ಯೋಜನೆಯಡಿ ಮಂಜೂರಾದ ರೂ.40.64 ಲಕ್ಷ ಅಂದಾಜು ವೆಚ್ಚದ ಪ್ರೌಢಶಾಲೆಯ ನೂತನ 8 ಕೋಣೆಗಳ ಕಟ್ಟಡ ಕಾಮಗಾರಿಯನ್ನು ಉದ್ಘಾಟಿಸಿದರು.

ಗ್ರ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿನಾಥ ಪ್ರಭು ಜಿಡ್ಡೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ ಬೀಳಗಿ, ಭೂ ಸೇನಾ ನಿಗಮದ ಅಧಿಕಾರಿ ಜಾಫರ ಅಲಿ, ಪ್ರಮುಖರಾದ ಗುರುನಾಥ ಜವಳಿಕರ, ಕಲ್ಯಾಣಿ ದೇವಂತಗಿ, ಬಸಲಿಂಗಯ್ಯ ಹಿರೇಮಠ, ಶಂಕರಲಿಂಗ ಪಾಟೀಲ್ ಮತ್ತಿತರರು ಇದ್ದರು. ಇದೇ ವೇಳೆ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.