ಶನಿವಾರ, ಏಪ್ರಿಲ್ 17, 2021
32 °C

ಮಹಿಳಾ ಸ್ವಾವಲಂಬನೆಗೆ ಶಿಕ್ಷಣ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಈ ಹಿಂದೆ ಎಂದೂ ಬೆಳಕನ್ನೇ ಕಾಣದ ಮಹಿಳೆಯ ಕಣ್ಣುಗಳಿಗೆ ಜ್ಞಾನ ಎಂಬ ಬೆಳಕಿನ ಸ್ಪರ್ಶ ಆದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ರತ್ನಾ ಕಲಮದಾನಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇಡಂ ತಾಲ್ಲೂಕು, ಬೆಂಗಳೂರಿನ ಸಿಡಿಎಫ್ ಮತ್ತು ಕಡಚರ್ಲಾ ಗ್ರಾಮದ ಶ್ರೀ ಗುರುರಾಘವೇಂದ್ರ ಸೇವಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಮತ್ತು ಐಸಿಡಿಎಸ್ ಯೋಜನೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ  ಮಾತನಾಡಿದರು.

 

ಮಹಿಳಾ ಹಕ್ಕುಗಳಿಗಾಗಿ ಕಳೆದ ಒಂದು ಶತಕದ ಅವಧಿಯಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂದು ಬಂದಿವೆ. ಆರ್ಥಿಕ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.ತಾಪಂ ಉಪಾಧ್ಯಕ್ಷೆ ಯಾದಮ್ಮ ನಾಗಪ್ಪ ಕೊಳ್ಳಿ ಕುರಕುಂಟಾ ಉದ್ಘಾಟಿಸಿದರು. ಶಾಸಕ ಡಾ. ಶರಣಪ್ರಕಾಶ ಪಾಟೀಲ ಊಡಗಿ, ಗುಲ್ಬರ್ಗ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಡಾ. ಉಷಾ ಶರ್ಮಾ ಪಾಟೀಲ ಮಾತನಾಡಿ, ಮಕ್ಕಳ ಶಿಕ್ಷಣದ ಭವಿಷ್ಯ ಜ್ಞಾನದ ಗಣಿಯಾಗಲು ಪಾಲಕರು ಅದರಲ್ಲೂ ಮಹಿಳೆಯರ ಪಾತ್ರ ಹಿರಿದು ಎಂದು ಕರೆ ನೀಡಿದರು.

 

ಸಿಡಿಪಿಓ ಸಿ.ವಿ.ರಾಮನ್ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಿಡಿಎಫ್ ಸಂಸ್ಥೆಯ ನಿರ್ದೇಶಕ ಅರುಣ್ ಸೆರಾವೊ ಪ್ರಾಸ್ತಾವಿಕ ಭಾಷಣ ಮಾಡಿದರು. ಮಹಿಳಾ ಸಮಾವೇಶದಲ್ಲಿ 25 ವರ್ಷ ನಿರಂತರ ಸೇವೆ ಮಾಡಿದ 154 ಅಂಗನವಾಡಿ ಕಾರ್ಯಕರ್ತೆಯರಿಗೆ, ಪುರಸಭೆಯ 30 ಜನ ಮಹಿಳಾ ಪೌರ ಕಾರ್ಮಿಕರಿಗೆ, 70 ವರ್ಷದ ವಯೋವೃದ್ದೆ ತರಕಾರಿ ಮಾರುವ ಮಹಿಳೆ, ಸ್ವಯಂ ಉದ್ಯೋಗಿ ಯಶೋಧಾ, ಆಶಾ ಕಾರ್ಯಕರ್ತೆಯರಾದ ಪಾರ್ವತಿ ಮುಗನೂರು ಮತ್ತು ರತ್ನಾ ಬಟಗೇರಾ ಅವರನ್ನು ಸನ್ಮಾನಿಸಲಾಯಿತು.

 

ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಒನಕೆ ಓಬವ್ವ ಎಲ್ಲರ ಗಮನ ಸೆಳೆಯಿತು. ತಹಸೀಲ್ದಾರ ಕಚೇರಿಯಿಂದ ಆರಂಭಗೊಂಡ ಪೂರ್ಣ ಕುಂಭ ಮೆರವಣಿಗೆ ಕಾನಾಗಡ್ಡಾ ಕಲ್ಯಾಣ ಮಂಟಪದಲ್ಲಿ ಸಮವಾವೇಶಗೊಂಡಿತು. 2 ಸಾವಿರಕ್ಕೂ ಮಿಕ್ಕು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸೇವಾ ಸಂಸ್ಥೆಯ ಅಧ್ಯಕ್ಷ ನರಸರೆಡ್ಡಿ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.