ಬುಧವಾರ, ನವೆಂಬರ್ 13, 2019
28 °C

ನೀತಿ ಸಂಹಿತೆ: ಜಿಲ್ಲೆಯಲ್ಲಿ 15 ಪ್ರಕರಣ ದಾಖಲು

Published:
Updated:

ಗುಲ್ಬರ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.18ರ ತನಕ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ದಾಖಲೆ ರಹಿತ 15 ಲಕ್ಷ ರೂಪಾಯಿ ನಗದು ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಜಪ್ತಿ ಮಾಡಲಾಗಿದೆ.ಉಳಿದಂತೆ ತಪಾಸಣೆ ವೇಳೆ ಪತ್ತೆಯಾಗಿದ್ದ ದಾಖಲೆ ಒದಗಿಸಿದ ನಗದು ಹಣವನ್ನು ಹಿಂತಿರುಗಿಸಲಾಗಿದೆ.ಸೇಡಂ ಕ್ಷೇತ್ರದ ಮುಧೋಳ ಠಾಣಾ ವ್ಯಾಪ್ತಿಯಲ್ಲಿ 100 ಕ್ಯಾಲೆಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಏ.14ರಂದು ದಾಖಲೆ ರಹಿತ 15 ಲಕ್ಷ ರೂಪಾಯಿ ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಜಪ್ತಿ ಮಾಡಲಾಗಿದೆ.  ಮದ್ಯ-ಬಂಧನ: ಜಿಲ್ಲೆಯಲ್ಲಿ ಈ ತನಕ ವಿವಿಧ ಪ್ರಕರಣಗಳಲ್ಲಿ ಸುಮಾರು 1,860.89 ಲೀಟರ್ ಅಕ್ರಮ ಮದ್ಯ ಜಪ್ತಿ ಮಾಡಲಾಗಿದ್ದು, ಈ ಸಂಬಂಧ 11ಮಂದಿಯನ್ನು ಬಂಧಿಸಲಾಗಿದೆ.ಏ.8ರ ತನಕ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ, 37.09 ಲೀಟರ್ ಮದ್ಯ ಜಪ್ತಿ ಮಾಡಿ 4 ಜನರನ್ನು ಬಂಧಿಸಲಾಗಿದೆ.ಏ.9ರಂದು ಸೇಡಂನಲ್ಲಿ ಒಂದು ಲೀಟರ್ ಮದ್ಯ, ಏ.13ರಂದು ಆಳಂದದ ಖಜೂರಿಯಲ್ಲಿ 20 ಲೀ ಮದ್ಯ ಜಪ್ತಿ ಮಾಡಿ 2 ಬಂಧನ, ಏ.15ರಂದು ಆಳಂದದ ಜಿಡಗಾದಲ್ಲಿ 33.8 ಲೀಟರ್ ಮದ್ಯ ಜಪ್ತಿ ಮಾಡಿ 2 ಬಂಧನ, ಏ.15ರಂದು ನಗರದ ಜಗತ್ ವೃತ್ತದ ಬಳಿ 780 ಲೀಟರ್ ಜಪ್ತಿ ಮಾಡಿ 2 ಬಂಧನ ಮತ್ತು ಏ.18ರಂದು ಆಳಂದದ ನಿರಗುಡಿ ಬಳಿ 990 ಲೀ. ಜಪ್ತಿ ಮಾಡಿ ಒಬ್ಬನ ಬಂಧನ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)