ಶುಕ್ರವಾರ, ಜೂಲೈ 10, 2020
21 °C

ತೊಗರಿ ಖರೀದಿ: ಭರವಸೆ ತೊರೆದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ಸರ್ಕಾರ ರೈತರ ತೊಗರಿಯನ್ನ ಖರೀದಿ ಮಾಡುವುದಾಗಿ ಎರಡು ತಿಂಗಳ ಹಿಂದೆ ಘೋಷಣೆ ಮಾಡಿದರೂ, ಸರ್ಕಾರ ತೊಗರಿ ಖರೀದಿ ಮಾಡಲು ಮುಂದೆ ಬರದೆ ಇರುವುದರಿಂದ, ಅನಿವಾರ್ಯಕ್ಕಾಗಿ ಸಾಲದ ತಾಪತ್ರೆ ತಾಳದೆ ಕಡಿಮೆ ಬೆಲೆಗೆ ರೈತರು ತೊಗರಿ ಮಾರಾಟ ಮಾಡುತ್ತಿದ್ದಾರೆ.ಇಲ್ಲಿನ ಎಪಿಎಂಸಿ ಯಲ್ಲಿ ಸೋಮವಾರ  ತೊಗರಿ ತೆಗೆದುಕೊಂಡು ಬಂದಿರುವ ರೈತರು ಕಡಿಮೆ ಬೆಲೆಗೆ ತೊಗರಿಯನ್ನು ಮಾರಾಟ ಮಾಡಿದರು. ಕ್ವಿಂಟಲ್‌ಗೆ ರೂ.3400  ಗಳಿಂದ ರೂ.3600  ಗಳವರೆಗೆ ತೊಗರಿ ಮಾರಾಟವಾಗಿದೆ.ಆದರೆ ರೈತರು ಮಾಡಿರುವ ಖರ್ಚು,ವೆಚ್ಚಕ್ಕೂ ತೊಗರಿ ಬೆಲೆಗೂ ಯಾವುದೇ ರೀತಿಯ ಹೊಂದಾಣಿಕೆಯಾಗುತ್ತಿಲ್ಲ. ತೊಗರಿ ಮಾರಾಟದಿಂದ ಬರುವ ಲಾಭಕ್ಕಿಂತಲೂ ಖರ್ಚು ಜಾಸ್ತಿಯಾಗಿದೆ ಎಂದು ರೈತರು ಹೇಳುತ್ತಾರೆ.ಕಳೆದ ಎರಡು ವರ್ಷಗಳಿಂದ ತೊಗರಿ ಇಳುವರಿ ಸರಿಯಾಗಿ ಬರುತ್ತಿಲ್ಲ. ಕಳೆದ ವರ್ಷ ಮಳೆಯಿಂದ ತೊಗರಿ ಹಾಳಾಗಿ ಹೋದರೂ ಈ ವರ್ಷ ತೊಗರಿ ಬೆಳೆಗೆ ಮಂಜು ಮತ್ತು ಗೊಡ್ಡು ರೋಗ, ನೆಟೆ ರೋಗ ಬಂದಿರುವದರಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. 63 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿರುವ ತೊಗರಿ ಸುಮಾರು 20 ಸಾವಿರ ಹೆಕ್ಟೇರ್ ತೊಗರಿ ಹಾಳಾಗಿ ಹೋಗಿದೆ. ಎರಡು ವರ್ಷಗಳಿಂದ ರೈತ ಮಾಡಿರುವ ಸಾಲವನ್ನ ತೀರಿಸಲು ಹೆಚ್ಚಿನ ಕ್ಷೇತ್ರದಲ್ಲಿ ತೊಗರಿ ಬೆಳೆದರೆ ಆದರೆ ತೊಗರಿ ಬೆಳೆ ಮತ್ತು ಬೆಲೆ ಎರಡು ಕೈಕೊಟ್ಟಿದ್ದರಿಂದ, ರೈತರು ಕೃಷಿಗೆ ಶರಣು ಹೊಡೆಯುತ್ತಿದ್ದಾರೆ.   ಸರ್ಕಾರದವರು ಕನಿಷ್ಠ ಪ್ರತಿ ಕ್ವಿಂಟಲ್ ರೂ.4500  ಬೆಲೆಗೆ ತೊಗರಿ ಖರೀದಿ ಮಾಡಲು ಆರಂಭಿಸಬೇಕು ಇಲ್ಲದಿದ್ದರೆ ರೈತ ದಿವಾಳಯಾಗುತ್ತಾನೆ. ಸರ್ಕಾರ ತಕ್ಷಣ ಮಾರುಕಟ್ಟೆ ಪ್ರವೇಶ ಮಾಡಬೇಕು. ಗುಲ್ಬರ್ಗ ತೊಗರಿ ಅಭಿವೃದ್ಧಿ ಮಂಡಳಿ ನಿದ್ರೆ ಮಾಡುತ್ತಿದೆ ಎಂಬುವುದು ಗೊತ್ತಾಗುತ್ತಿಲ್ಲ ರೈತರಿಗೆ ಪ್ರಯೋಜನವಾಗದಿದ್ದರೆ ಮಂಡಳಿಯಾದರೂ ಏಕೆ ಬೇಕು ಇದರ ಬಗ್ಗೆ ಒಂದು ವಾರದಲ್ಲಿ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.