ನಾಗ್ಪುರ: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 48 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು.

ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಧ್ವಂಸಗೊಳಿಸಿದರು. ವಿಶ್ವದ ಅಗ್ರಮಾನ್ಯ ಟಿ20 ಬ್ಯಾಟರ್ ಆಗಿರುವ ಅವರು ಎಗ್ಗಿಲ್ಲದೇ ಬ್ಯಾಟ್ ಬೀಸಿ ಕೇವಲ 35 ಎಸೆತಗಳಲ್ಲಿ 84 ರನ್ ಸಿಡಿಸಿದರು. ಕೊನೆಯಲ್ಲಿ ರಿಂಕು ಸಿಂಗ್ ಅವರೂ ಬಿರುಸಿನ ಆಟವಾಡಿದರು. ಅದರಿಂದಾಗಿ, ಸೂರ್ಯಕುಮಾರ್ ಯಾದವ್ ಪಡೆಯು ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 238 ರನ್ಗಳ ಭಾರಿ ಮೊತ್ತ ಗಳಿಸಿತು.

ಕಠಿಣ ಗುರಿ ಬೆನ್ನಟ್ಟಿದ ಮಿಚೆಲ್ ಸ್ಯಾಂಟನರ್ ಬಳಗಕ್ಕೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮೊದಲ ಓವರ್ ನಲ್ಲಿಯೇ ಆಘಾತ ನೀಡಿದರು. ಡೆವೊನ್ ಕಾನ್ವೆ ಅವರು ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ, ರಚಿನ್ ರವೀಂದ್ರ (1; 5ಎ) ಅವರು ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಅಭಿಷೇಕ್ ಹಿಡಿದ ಅಮೋಘ ಕ್ಯಾಚ್ಗೆ ಹಿಂತಿರುಗಬೇಕಾಯಿತು.

ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ (78; 40ಎ, 4x4, 6x6) ಅವರು ಟಿಮ್ ರಾಬಿನ್ಸನ್ (21; 15ಎ) ಜೊತೆಗೂಡಿ ಮೂರನೇ ವಿಕೆಟ್ಗೆ 51 ರನ್ ಸೇರಿಸಿ ದರು. ರಾಬಿನ್ಸನ್ ಔಟಾದ ಬಳಿಕ ಮಾರ್ಕ್ ಚಾಪ್ಮನ್ (39; 24ಎ, 4x4, 6x2) ಅವರೊಂದಿಗೆ 79 ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಕಿವೀಸ್ ಪಡೆ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ನ್ಯೂಜಿಲೆಂಡ್ 7 ವಿಕೆಟ್ಗೆ 190 ರನ್ ಗಳಿಸಿ, ಸವಾಲು ಮುಗಿಸಿತು.

ಇದಕ್ಕೆ ಮೊದಲು, ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡವು 27 ರನ್ಗಳಾಗುವಷ್ಟರಲ್ಲಿ ಆರಂಭ ಆಟಗಾರ ಸಂಜು ಸ್ಯಾಮ್ಸನ್ (10) ಮತ್ತು ಮೂರನೇ ಕ್ರಮಾಂಕದಲ್ಲಿ ಆಡಿದ ಇಶಾನ್ ಕಿಶನ್ (8) ಅವರನ್ನು ಕಳೆದುಕೊಂಡಿತ್ತು. ಆದರೆ, ಇನ್ನೊಂದು ಬದಿಯಲ್ಲಿ ನೆಲೆಯೂರಿ ನಿಂತ ಅಭಿಷೇಕ್ ಬಿರುಸಿನ ಅರ್ಧಶತಕ ಬಾರಿಸಿದರು. ಅವರ ಇನಿಂಗ್ಸ್ನಲ್ಲಿ ಎಂಟು ಭರ್ಜರಿ ಸಿಕ್ಸರ್ ಮತ್ತು ಐದು ಬೌಂಡರಿಗಳು ಇದ್ದವು.

ಅಭಿಷೇಕ್ ಅವರಿಗೆ ಕಿವೀಸ್ ಬೌಲಿಂಗ್ ಪಡೆಯಲ್ಲಿ ಯಾರೂ ಅಪಾಯ ವೊಡ್ಡುವಂತೆ ಕಾಣಲಿಲ್ಲ. ಕ್ರಿಸ್ಟಿನ್ ಕ್ಲಾರ್ಕ್ ಮತ್ತು ಕೈಲ್ ಜೇಮಿಸನ್ ತೀವ್ರ ದಂಡನೆಗೊಳಗಾದರು. ಮೂರು ಸಿಕ್ಸರ್ಗಳ ನಂತರವಷ್ಟೇ, ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ಬೌಲಿಂಗ್ನಲ್ಲಿ ಅವರ ಮೊದಲ ಬೌಂಡರಿ ಬಂದಿತು. ಅಭಿಷೇಕ್ ಆಟದಿಂದಾಗಿ ನಿರಾಳರಾದ ಸೂರ್ಯ ಎಂದಿನ ಲಯದಲ್ಲಿ ಅಲ್ಲದಿದ್ದರೂ ಕೊಂಚ ವಿಶ್ವಾಸದಿಂದ ಆಡಿ 22 ಎಸೆತಗಳಲ್ಲಿ 32 ರನ್ ಬಾರಿಸಿದರು. ಅಭಿಷೇಕ್ ಜೊತೆಗೂಡಿ ಮೂರನೇ ವಿಕೆಟ್ಗೆ ಕೇವಲ 47 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದರು.

ಇನಿಂಗ್ಸ್ನ ಅಂತಿಮ ಕೆಲವು ಓವರುಗಳಲ್ಲಿ ರಿಂಕು ಸಿಂಗ್ (ಅಜೇಯ 44, 20 ಎ) ಅವರು ತಂಡದ ಮೊತ್ತ ಮತ್ತಷ್ಟು ಹಿಗ್ಗಲು ಕಾರಣರಾದರು. ದೀರ್ಘಕಾಲದ ನಂತರ ಫಿನಿಷರ್ ಪಾತ್ರದಲ್ಲಿ ಮಿಂಚಿದ ಅವರು 4 ಸಿಕ್ಸರ್, 3 ಬೌಂಡರಿಗಳನ್ನು ಚಚ್ಚಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರುಗಳಲ್ಲಿ 7 ವಿಕೆಟ್ಗೆ 238 (ಅಭಿಷೇಕ್ ಶರ್ಮ 84, ಸೂರ್ಯಕುಮಾರ್ ಯಾದವ್ 32, ಹಾರ್ದಿಕ್ ಪಾಂಡ್ಯ 25, ರಿಂಕು ಸಿಂಗ್ ಔಟಾಗದೇ 44; ಜೇಕಬ್ ಡಫಿ 27ಕ್ಕೆ2, ಕೈಲ್ ಜೇಮಿಸನ್ 54ಕ್ಕೆ2).

ನ್ಯೂಜಿಲೆಂಡ್: 20 ಓವರುಗಳಲ್ಲಿ 7 ವಿಕೆಟ್ಗೆ 190 (ಗ್ಲೆನ್ ಫಿಲಿಪ್ಸ್ 78, ಮಾರ್ಕ್ ಚಾಪ್ಮನ್ 39, ಡೇರಿಲ್ ಮಿಚೆಲ್ 28; ವರುಣ್ ಚಕ್ರವರ್ತಿ 37ಕ್ಕೆ2, ಶಿವಂ ದುಬೆ 28ಕ್ಕೆ2).

ಫಲಿತಾಂಶ: ಭಾರತ ತಂಡಕ್ಕೆ 48 ರನ್ ಜಯ; ಸರಣಿಯಲ್ಲಿ 1–0 ಮುನ್ನಡೆ. ಪಂದ್ಯದ ಆಟಗಾರ: ಅಭಿಷೇಕ್ ಶರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.