16 ಅಭ್ಯರ್ಥಿಗಳ ನಾಮಪತ್ರ ವಾಪಸ್

ಸೋಮವಾರ, ಜೂನ್ 17, 2019
31 °C

16 ಅಭ್ಯರ್ಥಿಗಳ ನಾಮಪತ್ರ ವಾಪಸ್

Published:
Updated:

ಇಂಡಿ: ಇಲ್ಲಿನ ಪುರಸಭೆ ಚುನಾವಣೆಯ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸಿದ್ದ 16 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಇದೀಗ 23 ವಾರ್ಡ್‌ಗಳಿಂದ ಒಟ್ಟು 91 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಉಮೇದುವಾರಿಕೆ ಹಿಂಪಡೆದವರು: ವಾರ್ಡ್ 1ರಿಂದ ಧನ್ಯಕುಮಾರ ಬಾಪುರಾಯ ಧನಪಾಲ, ವಾರ್ಡ್ 2ರಿಂದ ಹಳ್ಳದಮನಿ ಶಿವಮ್ಮ ಶಿವಪುತ್ರ, ವಾರ್ಡ್ 6ರಿಂದ ಕುಲಸುಮ್‌ಬೀ ಮೈಬೂಬ್ ಹವಾಲ್ದಾರ, ವಾರ್ಡ್ 8ರಿಂದ ಪ್ರೇಮಾಬಾಯಿ ಅಶೋಕ ಕುಲಕರ್ಣಿ, ವಾರ್ಡ್ 8ರಿಂದ ಬನಶಂಕರಿ ಸಂಜಯ ರಾಠೋಡ, ವಾರ್ಡ್ 9ರಿಂದ ಅಬುಬಕರ್‌ ಹಾರೂನರಶೀದ್‌ ಮುಲ್ಲಾ, ವಾರ್ಡ್ 9ರಿಂದ ಹುಸೇನ್‌ ಮಹ್ಮದಸಾಹೇಬ್‌ ಜಮಾದರ್, ವಾರ್ಡ್ 10ರಿಂದ ಮಹಾದೇವಿ ದಾನಯ್ಯ ಹಿರೇಮಠ, ವಾರ್ಡ್ 11ರಿಂದ ಸಮೀರಿನಾ ಸದ್ದಾಂ ಅರಬ್, ವಾರ್ಡ್ 13ರಿಂದ ಲಕ್ಷ್ಮಣ ತೇಜಪ್ಪ ಲಾಳಸಂಗಿ, ವಾರ್ಡ್ 13ರಿಂದ ಆನಂದ ವೇಂಕಟೇಶ ಕುಲಕರ್ಣಿ, ವಾರ್ಡ್ 17ರಿಂದ ಫಾರೂಕ್‌ ಮಹ್ಮದ್‌ ಬಾಗವಾನ, ವಾರ್ಡ್ 17ರಿಂದ ಮಹಿಬೂಬ್‌ ಅಬ್ದುಲಗನಿ ಅರಬ್‌, ವಾರ್ಡ್ 23ರಿಂದ ಲಾಲಬಿ ನಬೀಲಾಲ್‌ ಸೈಯದ್‌ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.

23 ವಾರ್ಡ್‌ನಿಂದ 106 ಅಭ್ಯರ್ಥಿಗಳಿಂದ 112 ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ 6 ನಾಮಪತ್ರ ತಿರಸ್ಕೃತಗೊಂಡಿದ್ದವು. 107 ಅಭ್ಯರ್ಥಿಗಳಲ್ಲಿ ಇದೀಗ 16 ಜನ ನಾಮಪತ್ರ ಹಿಂಪಡೆದ ಕಾರಣ, 91 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !