ಬುಧವಾರ, ಮೇ 12, 2021
18 °C

ಸಾಹಿತ್ಯ ಸಮ್ಮೇಳನ ಲಾಂಛನ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜೂನ್ 15 ಮತ್ತು 16 ರಂದು ನಡೆಯಲಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಗುರುವಾರ ಅನಾವರಣ ಮಾಡಿದರು.ನಂತರ ಮಾತನಾಡಿದ ಪ್ರೊ.ಮಲ್ಲೇಪುರಂ, `ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಈಚೆಗೆ ಸಾಕಷ್ಟು ವಿನೂತನ ಕಾರ್ಯಕ್ರಮ ರೂಪಿಸಿಸುತ್ತಿದೆ. ಯುವ ಸಾಹಿತಿಗಳು ಸೇರಿದಂತೆ ಸಾಹಿತ್ಯ ವಲಯದ ಎಲ್ಲರೂ ಕೂಡಿ ಉತ್ಸಾಹದಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ ತಯಾರಿ ನಡೆಸಿರುವುದು ಶ್ಲಾಘನೀಯ' ಎಂದರು.`ವೈವಿಧ್ಯತೆಯಿಂದ ಕೂಡಿದ ಗುಲ್ಬರ್ಗದಲ್ಲಿ ಎಲ್ಲ ಧರ್ಮೀಯರು ಒಟ್ಟಾಗಿ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಬುದ್ಧ ವಿಹಾರ, ದರ್ಗಾ ಹಾಗೂ ಶರಣ ಬಸವೇಶ್ವರ ದೇವಸ್ಥಾನದಂತಹ ಎಲ್ಲ ಶ್ರದ್ಧಾಕೇಂದ್ರ ಒಳಗೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ತಯಾರಿಸಿದ್ದು ವಿಶೇಷವಾಗಿದೆ' ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, `ಸಾಮಾನ್ಯವಾಗಿ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಾಂಛನ ಬಿಡುಗಡೆಗೊಳಿಸುವ ಪದ್ಧತಿಯಿತ್ತು. ಆದರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಲಾಂಛನ ಬಿಡುಗಡೆ ಮಾಡಿ ಗುಲ್ಬರ್ಗ ಜಿಲ್ಲಾ ಕಸಾಪ ವಿನೂತನ ಹೆಜ್ಜೆ ಇಟ್ಟಿದೆ' ಎಂದರು.ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ, ಡಾ. ರಾಜೇಂದ್ರ ಹಾಗೂ ಹಿರಿಯ ಸಾಹಿತಿಗಳಾದ ಅಪ್ಪಾರಾವ ಅಕ್ಕೋಣಿ, ಪ್ರೊ. ಕಾಶಿನಾಥ ಅಂಬಲಗಿ, ಗವೀಶ ಹಿರೇಮಠ, ಪಿ.ಎಂ. ಮಣೂರ್, ವಜ್ರಕುಮಾರ ಕಿವಡೆ, ಪ್ರೊ.ಎಚ್.ಟಿ. ಪೋತೆ, ಶ್ರೀಶೈಲ ನಾಗರಾಳ, ಚಿ.ಸೀ. ನಿಂಗಣ್ಣ, ಎಸ್.ಪಿ. ಸುಳ್ಳದ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.