ಶುಕ್ರವಾರ, ಮೇ 20, 2022
20 °C

`ಕುಕೃತ್ಯ ನಿಯಂತ್ರಣಕ್ಕೆ ವಿವೇಕಮಾರ್ಗ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕುಕೃತ್ಯ ನಿಯಂತ್ರಣಕ್ಕೆ ವಿವೇಕಮಾರ್ಗ'

ಗುಲ್ಬರ್ಗ: ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನು ನಿಯಂತ್ರಿಸಲು ಸ್ವಾಮಿ ವಿವೇಕಾನಂದರು ನೀಡಿದ ಅಧ್ಯಾತ್ಮದ ದಾರಿಯಿಂದ ಮಾತ್ರ ಸಾಧ್ಯ ಎಂದು ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಅಭಿಪ್ರಾಯಪಟ್ಟರು.ನಗರದ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ ವತಿಯಿಂದ ಗುರುವಾರ ನಡೆದ ಸ್ವಾಮಿ ವಿವೇಕಾನಂದರ 111ನೇ ಮಹಾನಿರ್ವಾಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತ ದೇಶವು ಮಹಾನ್ ರಾಷ್ಟ್ರವಾಗಿದ್ದು, ಈ ಭೂಮಿಯಲ್ಲಿ ವಿವೇಕಾನಂದರಂತಹ ಮಹಾನ್ ಪುರುಷರು ಆಗಿಹೋಗಿದ್ದಾರೆ. ಇವರು ನಮ್ಮ ಸಂಸ್ಕೃತಿಯ ರಕ್ಷಣೆಗೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಹಿಂದೆ ಬ್ರಿಟಿಷರ ದೌರ್ಜನ್ಯದಿಂದ ನಲುಗಿದ್ದ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವಲ್ಲಿ ವಿವೇಕಾನಂದರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಇಂದು ನಮ್ಮ ಜನರು ಮೈಮರೆತು ಮತ್ತೊಮ್ಮೆ ವಿದೇಶಿ ಗುಲಾಮಗಿರಿಗೆ ಜಾರುವಂತಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.ನಮ್ಮ ನೆಲದ ಸಂಸ್ಕೃತಿಯನ್ನು ಮರೆತಿರುವುದರಿಂದಲೇ ಇಂದು ನಮ್ಮ ಸುತ್ತಮುತ್ತ ಅಪಹರಣ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರದಂತಹ ಹೀನ ಕೃತ್ಯಗಳು ನಡೆಯುತ್ತಿವೆ. ಇದಕ್ಕೆಲ್ಲಾ ಕಾನೂನಿನಿಂದ ನಿಯಂತ್ರಣ ಸಾಧ್ಯವಿಲ್ಲ. ಬದಲಾಗಿ ವಿವೇಕಾನಂದರು ನೀಡಿದ ಅಧ್ಯಾತ್ಮದಿಂದ ಜನರ ಮನಸ್ಸು ಬದಲಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ವಿವೇಕಾನಂದ ಕೇಂದ್ರದ ಎಸ್.ವಿ.ಮಹೂರಕರ ಅವರು ಮಾತನಾಡಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಎಂ.ಎಂ.ಕಾಡಾದಿ, ಶಶಿಕಾಂತ ಆರ್. ಮಿಸೆ ಕಾರ್ಯಕ್ರಮದಲ್ಲಿ  ಉಪಸ್ಥಿ ತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.