ಬುದ್ಧಗಯಾದಲ್ಲಿ ಸರಣಿ ಬಾಂಬ್ ಸ್ಫೋಟ: ವಿವಿಧೆಡೆ ಪ್ರತಿಭಟ

ಬುಧವಾರ, ಜೂಲೈ 24, 2019
24 °C

ಬುದ್ಧಗಯಾದಲ್ಲಿ ಸರಣಿ ಬಾಂಬ್ ಸ್ಫೋಟ: ವಿವಿಧೆಡೆ ಪ್ರತಿಭಟ

Published:
Updated:

ಗುಲ್ಬರ್ಗ: ಬಿಹಾರದ ಬುದಟಛಿಗಯಾದಲ್ಲಿ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟ ಖಂಡಿಸಿ ಜಿಲ್ಲೆಯ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಘಟನೆಗೆ ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರ ದ ವೈಫಲ್ಯವೇ ಕಾರಣ ಎಂದು ವಿವಿಧ ಸಂಘಟನೆಗಳು ಖಂಡಿಸಿದವು. ಇಂತಹ ಕೃತ್ಯಗಳಲ್ಲಿ ತೊಡಗಿರುವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿತು.ಸೇಡಂ ವರದಿ: ತಾಲ್ಲೂಕು ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಸದಸ್ಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಉಪವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಇಂತಹ ಸರಣಿ ಬಾಂಬ್ ಸ್ಫೋಟಗಳು ಸಂಭ

ವಿಸಿದರೂ ಸರ್ಕಾರ ಕುರಡರಂತೆ ವರ್ತಿಸುತ್ತಿರುವ ುದು ಕಳವಳಕಾರಿ ಸಂಗತಿ. ಮುನ್ನೆಚ್ಚರಿಕೆ ಕ್ರಮ ಇಲ್ಲದ ಪರಿಣಾಮ ಇಂತಹ ಭದ್ರತಾ ಲೋಪ ಗಳು ಕಂಡು ಬರುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸರಿಯಾದ ನಿಟ್ಟಿನಲ್ಲಿ ಭದ್ರತೆ ಒದಗಿಸಿ ಬೇಕು ಎಂದು ಸಮಿತಿ ಎಚ್ಚರಿಸಿತು.ಸಂಚಾಲಕ ದೇವಿಂದ್ರ ಹೆಗಡೆ, ಲಕ್ಷ್ಮಣ ರಂಜೋಳಕರ್, ಮಲ್ಲಿಕಾರ್ಜುನ ಬಟಗೇರಾ (ಬಿ), ಹಣಮಂತ ಸಾಗರ, ಶೇಖರ ಕೊಡ

ದೂರ, ಮಹಾದೇವ ಚಿಟಕನಪಲ್ಲಿ, ಅಶೋಕ ದಂಡೋತಿ, ಸೋಮಶೇಖರ ಸಾಹು ಮತ್ತು ಶಂಭುಲಿಂಗ ನಾಟಿಕರ್ ಇದ್ದರು.ಆಳಂದ ವರದಿ: ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಗ್ರವಾಗಿ ಖಂಡಿಸಿ ಸೋಮವಾರ ತಹಶೀಲ್ದಾರ ಕಚೇರಿ

ಮುಂದೆ ಪ್ರತಿಭಟನೆ ನಡೆಸಿದರು.ಘಟನೆಗೆ ಸಂಬಂಧಿಸಿದಂತೆ ಬಿಹಾರ ಮುಖ್ಯವುಂತ್ರಿ ನಿತೀಶ ಕುಮಾರ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರಧಾನ ಮಂತ್ರಿ ಗಳಿಗೆ ಬರೆದ ಪತ್ರದಲ್ಲಿ ಬರೆದು ಮನವಿ ಮಾಡಿ ದರು. ಘಟನೆ ಕಾರಣರಾದ ವ್ಯಕ್ತಿಗಳನ್ನು ಶೀಘ್ರ ಪತ್ತೆ ಹಚ್ಚಿ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ದಲಿತ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ದಯಾನಂದ ಶೇರಿಕಾರ, ದಲಿತ ನೌಕರಸಂಘದ ಅಧ್ಯಕ್ಷ ರಮೇಶ ಮಾಡಿಯಾಳಕರ, ಕರ್ನಾಟಕ ದಲಿತ ಸೇನೆಯ ರಾಜ್ಯಾಧಕ್ಷ ಬಾಬುರಾವ ಅರೋಣದಯ, ಭೋಜರಾಜ ಜುಬ್ರೆ,ಸಂತೋಷ ಸಿಂಧೆ, ಪಾಂಡುರಂಗ ಮೊದಲೆ,ರಾಮಚಂದ್ರ ಮಾಳಗೆ, ತುಕಾರಾಮ ಹೆಬಳಿ, ರಮೇಶಕುಮಾರ, ಶರಣು ಕವಲಗಾ, ದತ್ತಾತ್ರೇಯ ಹೊನ್ನಳ್ಳಿ ಇತರರು ಇದ್ದರು.ಚಿಂಚೋಳಿ ವರದಿ: ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ

ಬಸ್ ಡಿಪೊ ಕ್ರಾಸ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಇದೊಂದು ಅತ್ಯಂತ ಹೇಯ ಕೃತ್ಯ. ಮಾನವ ಕುಲಕ್ಕೆ ಶಾಂತಿಯ ಸಂದೇಶ ನೀಡಿ, ಶಾಂತಿ ಮಾರ್ಗ ತೋರಿದ ಬುದಟಛಿನಿಗೆ ಮಾಡಿದ ಅಪಮಾನ. ಇಂತಹ ಸಮಾಜ ವಿರೋಧಿ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಹಿರಿಯ ವಕೀಲ ಮಾಣಿಕರಾವ್ ಗುಲಗುಂಜಿ ಹಾಗೂ ಮುಖಂಡ ಗೋಪಾಲರಾವ್ ಕಟ್ಟೀಮನಿ ಒತ್ತಾಯಿಸಿದರು.ಗೌತಮ ಬೊಮ್ಮನಳ್ಳಿ, ಸಂಜೀವ ಮೇತ್ರಿ, ಮಾರುತಿ ಗಂಜಗಿರಿ, ಸಯ್ಯದ್ ನಿಯಾಜ್ ಅಲಿ, ಶ್ರೀಮಂತ ಕಟ್ಟೀಮನಿ, ಗೋಪಾಲ ರಾಂಪುರೆ ಮುಂತಾದವರು ಘಟನೆ ಖಂಡಿಸಿ ದೇಶದ ಬೌದಟಛಿ ವಿಹಾರಗಳ ರಕ್ಷಣೆಗೆ ಒತ್ತಾಯಿಸಿದರು.ಜೇವರ್ಗಿ ವರದಿ: ದಲಿತ ಸಂಘರ್ಷ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರ

ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಇಂತಹ ಕೃತ್ಯ ನಡೆಸಿ ಶಾಂತಿ ಕದಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಲ್ಲಿಗೆ ಏರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ

ತಾಲೂಕ ಸಂಚಾಲಕ ಸಿದ್ದರಾಮ ಕಟ್ಟಿ ಆಗ್ರಹಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪುಂಡಲೀಕ ಗಾಯಕವಾಡ, ಶ್ರಿಶೈಲ ಬುಟ್ನಾಳ, ರಾಮಚಂದ್ರ ಧರೇನ್, ಮೌನೇಶ ಝಳಕಿ,

ಶಂಕರ ಸುಂಠ್ಯಾಣ, ಗುಂಡಪ್ಪ ಜಡಗಿ, ಚಿದಾನಂದ ಗೌನಳ್ಳಿ, ಸಂಗಣ್ಣ ಹೊಸ್ಮನಿ, ಬಾಬುಮದರಿ, ಮಹೇಶ ಕ್ಷತ್ರಿ, ಲಕ್ಷ್ಮಣ ಡೊಳ್ಳೆ,

ಸಿದ್ದಪ್ಪ ಆಲೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry