ಮಂಗಳವಾರ, ಮೇ 17, 2022
27 °C

`ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ರೂ. 5.38 ಲಕ್ಷ ವೆಚ್ಚ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು ರೂ. 5,38,838 ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದರು.ಸಮ್ಮೇಳನಕ್ಕಾಗಿ ಒಟ್ಟು ರೂ. 5,86,600 ಹಣ ಸಂಗ್ರಹವಾಗಿತ್ತು. ಅದರಲ್ಲಿ ರೂ. 4.9 ಲಕ್ಷ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇಯಿಂದ ಬಂದಿದೆ. ಶಾಸಕ ದತ್ತಾತ್ರೇಯ ಪಾಟೀಲ ರೂ. 25 ಸಾವಿರ, ನೋಂದಣಿ ಶುಲ್ಕ ರೂ. 35,100, ಎಚ್‌ಕೆಇಎಸ್‌ನಿಂದ ರೂ. 20 ಸಾವಿರ, ಪುಸ್ತಕ ಮಳಿಗೆಗಳ ಬಾಡಿಗೆಯಿಂದ ರೂ. 9,500 ಹಾಗೂ ತೋಟ್ನಳ್ಳಿ ಸ್ನೇಹಿತರು ರೂ. 7 ಸಾವಿರ ದೇಣಿಗೆ ನೀಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಸಚಿವ ಖಮರುಲ್ ಇಸ್ಲಾಂ ಅವರು ಸಮ್ಮೇಳನಾಧ್ಯಕ್ಷರಿಗೆ ರೂ. 1 ಲಕ್ಷ ಹಮ್ಮಿಣಿ ನೀಡಿದ್ದಾರೆ. ಶ್ರೀಗುರು ವಿದ್ಯಾಪೀಠದ ಬಸವರಾಜ ಡಿಗ್ಗಾವಿ ಎರಡು ದಿನ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಸೋಮಶೇಖರ ಟೆಂಗಳಿ 100 ಶಾಲು ಹಾಗೂ ವಕೀಲ ಶರಣಪ್ಪ ಮಟ್ಟೂರ 500 ಬ್ಯಾಗ್ ಒದಗಿಸಿದ್ದರು ಎಂದರು.ಸಂಗ್ರಹವಾಗಿದ್ದ ಒಟ್ಟು ಹಣದಲ್ಲಿ ಸಮ್ಮೇಳನಕ್ಕೆ ಮಾಡಿರುವ ಖರ್ಚು ಕಳೆದು, ಇದೀಗ ಒಟ್ಟು ರೂ. 47,762 ಹಣ ಖಾತೆಯಲ್ಲಿ ಉಳಿದುಕೊಂಡಿದೆ. ಕಸಾಪ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಜಿಲ್ಲಾ ಕಸಾಪ ಖಾತೆಯಲ್ಲಿ ರೂ 52 ಸಾವಿರ ಬಾಕಿ ಇತ್ತು. ಮೂರು ಸಿಬ್ಬಂದಿಗೆ ಸಂಬಳ, ಪ್ರತಿ ವಾರ ಕಾರ್ಯಕ್ರಮ, ತಾಲ್ಲೂಕುಗಳ ಘಟಕಗಳ ರಚನೆ, ಇತ್ಯಾದಿ ಸಮಾರಂಭಕ್ಕೆ ಒಂದಿಷ್ಟು ಹಣ ವೆಚ್ಚ ಮಾಡಲಾಯಿತು ಎಂದು ತಿಳಿಸಿದರು.ಕನ್ನಡ ಭವನದಲ್ಲಿ ನಡೆಯುವ ವಿವಿಧ ಪತ್ರಿಕಾಗೋಷ್ಠಿ ಹಾಗೂ ಸಮಾರಂಭಗಳಿಂದಲೂ ಹಣ ಸಂಗ್ರಹವಾಗಿದೆ. ಜಿಲ್ಲಾ ಸಮ್ಮೇಳನದಿಂದ ಉಳಿದಿರುವ ಬಾಕಿ ಸೇರಿ ಒಟ್ಟು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬ್ಯಾಂಕ್ ಖಾತೆಯಲ್ಲಿ ಸದ್ಯ ರೂ. 2.5 ಲಕ್ಷ ಉಳಿದುಕೊಂಡಿದೆ ಎಂದು ಹೇಳಿದರು. ವಿವಿಧ ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.