ಸೋಮವಾರ, ಸೆಪ್ಟೆಂಬರ್ 16, 2019
23 °C

ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ

Published:
Updated:

ಗುಲ್ಬರ್ಗ: `ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವಜನತೆ ಪಾತ್ರ ಬಹುಮುಖ್ಯ' ಎಂದು ಬ್ರಹ್ಮಪುರ ಪೊಲೀಸ್ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಶರಣಬಸಪ್ಪ ಭಜಂತ್ರಿ ಹೇಳಿದರು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆಯುತ್ತಿರುವ ಎನ್‌ಸಿಸಿ (ನ್ಯಾಷನಲ್ ಕೆಡಟ್ ಕೋರ್) ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ (ಸಿಎಟಿಸಿ)ದಲ್ಲಿ ಈಚೆಗೆ ಸಂವಾದ ನಡೆಸಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.ಬೀದರ್‌ನ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಡಾ.ಚಾರಿ ಆರ್.ಕೆ. ಮಾತನಾಡಿ, `ವಿದ್ಯಾರ್ಥಿಗಳು ಸಮಯ ಪಾಲನೆ, ಶಾಲಾ ವೇಳಾಪಟ್ಟಿ ಜೊತೆ ಮನೆ ವೇಳಾಪಟ್ಟಿ ತಯಾರಿಸಬೇಕು. ಗುರಿ ತಲುಪಲು ಶಿಸ್ತುಬದ್ಧ ಜೀವನ ನಡೆಸಬೇಕು ಎಂದರು.ಹಿಂಗುಲಾಬಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಅಲ್ಲಂಪ್ರಭು ಮಾತನಾಡಿ, `ಸಮಯ ಪ್ರಜ್ಞೆ, ಶಿಸ್ತು, ಮನೆಯ ಅಡುಗೆ ಊಟದಂತಹ ಸರಳ ಕ್ರಮಗಳ ಮೂಲಕ ಔಷಧಿಯಿಂದ ದೂರ ಇರಬಹುದು' ಎಂದರು. ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ಹಾಗೂ ವಿದ್ಯಾರ್ಥಿನಿಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಿತು ಎಂದು ಡಾ. ಪಿ. ವಿಠಲ್‌ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)