ಹೋಳ ಹಬ್ಬದ ಚಕ್ಕಡಿ ಓಟ

7

ಹೋಳ ಹಬ್ಬದ ಚಕ್ಕಡಿ ಓಟ

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ರಾಜೇಶ್ವರದಲ್ಲಿ ಗುರುವಾರ ಸಂಜೆ ಹೋಳ ಹಬ್ಬದ ಅಂಗವಾಗಿ ಚಕ್ಕಡಿ ಓಟದ ಸ್ಪರ್ಧೆ ನಡೆಯಿತು. ಹಲವು ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ಸಾವಿರಾರು ಜನರು ಚಕ್ಕಡಿ ಓಟ ವೀಕ್ಷಿಸಿ ಸಂಭ್ರಮಿಸಿದರು.ಗ್ರಾಮ ಪಂಚಾಯಿತಿ ಹಳೆಯ ಕಟ್ಟಡದ ಎದುರಿನ ಕಿರಿದಾದ ರಸ್ತೆಯಲ್ಲಿ ಚಿಕ್ಕ ಗಾಲಿಗಳ ಚಕ್ಕಡಿಯ ನೊಗಕ್ಕೆ ಕಟ್ಟಿದ ಎತ್ತುಗಳು ವೇಗವಾಗಿ ಓಡುವುದನ್ನು ನೋಡಿ ಜನರು ರೋಮಾಂಚನಗೊಂಡರು. ಕಾರ ಹುಣ್ಣಿಮೆ ಹಬ್ಬವನ್ನು ಇದು ನೆನಪಿಸಿತು.ಹಬ್ಬ ಅಂಗವಾಗಿ ರೈತರು ಬೆಳಿಗ್ಗೆ ಎತ್ತುಗಳ ಮೈತೊಳೆದು, ಕೋಡುಗಳಿಗೆ ಬಾಸಿಂಗ್ ಕಟ್ಟಿ ಪೂಜೆ ಸಲ್ಲಿಸಿದರು. ನಂತರ ಮಾವಿನ ತೋರಣ ಕಟ್ಟಿ ಸಿಂಗರಿಸಿದ ಚಿಕ್ಕಡಿಗೆ ಅವುಗಳನ್ನು ಕಟ್ಟಿ ಮೆರವಣಿಗೆ ಮೂಲಕ ಸ್ಪರ್ಧೆ ನಡೆಯುವ ಸ್ಥಳಕ್ಕೆ ಕರೆತಂದರು.ಒಂದು ಜೋಡಿ ಹಸುಗಳನ್ನು ಚಕ್ಕಡಿಗೆ ಕಟ್ಟಿ ಓಡಿಸಲಾಯಿತು. 45ಕ್ಕೂ ಹೆಚ್ಚಿನ ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು.

ಶಾಸಕ ರಾಜಶೇಖರ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ಪಾಟೀಲ, ವಿಕ್ರಮ ಪೋಸ್ತಾರ, ಬೀದರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಜೀವರೆಡ್ಡಿ ಯರಬಾಗ, ಅಹಮ್ಮದ ಪಾಷಾ ಪೂಜಾರಿ ಅವರು ಚಕ್ಕಡಿ ಓಟ  ವೀಕ್ಷಿಸಿದರು.ನಂತರ ಹನುಮಾನ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಬ್ಬೀರಗೆ ಪ್ರಥಮ ಬಹುಮಾನವಾಗಿ ಎತ್ತಿನ ಬಂಡಿ, ಮಹಮ್ಮದ್ ಇಬ್ರಾಹಿಂ ಅವರಿಗೆ ಎರಡನೇ ಬಹುಮಾನವಾಗಿ ನೇಗಿಲು ಮತ್ತು ಕಾಶಪ್ಪ ಸೀಗಿ ಅವರಿಗೆ ಮೂರನೇ ಬಹುಮಾನವಾಗಿ ಎತ್ತಿನ ಝೋಲಾ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಂತೋಷಮ್ಮ ಪುಂಡಲೀಕ ಬಹುಮಾನ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry