‘ಪ್ರತೀ ವರ್ಷ 200 ಯೋಧರು ಅಂಗವಿಕಲರಾಗುತ್ತಾರೆ’

7

‘ಪ್ರತೀ ವರ್ಷ 200 ಯೋಧರು ಅಂಗವಿಕಲರಾಗುತ್ತಾರೆ’

Published:
Updated:
ಸಾಂದರ್ಭಿಕ ಚಿತ್ರ

ನವದೆಹಲಿ: ‘ಪರ್ವತ ಭಾಗದಲ್ಲಿ ಸಂಭವಿಸುವ ಹಿಮಪಾತ, ರಸ್ತೆ ಅಪಘಾತ ಹಾಗೂ ಸೆಣಸಾಟದ ವೇಳೆ ಪ್ರತೀ ವರ್ಷ 200 ಯೋಧರು ಅಂಗವಿಕಲರಾಗುತ್ತಿದ್ದಾರೆ’ ಎಂದು ಸೇನೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

‘ಯೋಧರು, ಬೆನ್ನುಮೂಳೆ ಹಾಗೂ ಕಾಲುಗಳ ಗಾಯಕ್ಕೆ ತುತ್ತಾಗುತ್ತಿರುವುದಲ್ಲದೇ, ಕರುಳು, ಶ್ವಾಸಕೋಸ, ಹೊಟ್ಟೆ ಭಾಗದ ಗಾಯಕ್ಕೂ ತುತ್ತಾಗುತ್ತಿದ್ದಾರೆ’ ಎಂದು ಸೇನೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ಪುರಿ ತಿಳಿಸಿದ್ದಾರೆ.

‘ಪ್ರತೀ ವರ್ಷ 200 ಮಂದಿ ಯೋಧರು ಗಂಭೀರ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ. ಹೋರಾಟದ ವೇಳೆ ಗಾಯಗೊಳ್ಳುವ ಪ್ರಕರಣಗಳೇ ಹೆಚ್ಚು’ ಎಂದರು.

ಭಾರತೀಯ ಸೇನೆಯು 10 ಲಕ್ಷ ಯೋಧರನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೆಣಸಾಟ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯು ಮಹತ್ವದ ಪಾತ್ರ ವಹಿಸುತ್ತಿದೆ.

‘ಗಾಯಾಳು ಯೋಧರನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡುವುದು ಸೇನೆಗೆ ಮಹತ್ವದ ಸವಾಲಾಗಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ವಿಚಾರಗಳು ಒಳಗೊಂಡಿರುತ್ತವೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !