ಬುಧವಾರ, ಜನವರಿ 29, 2020
24 °C

ಕೌಶಲ ತರಬೇತಿ ಸಂಸ್ಥೆಗೆ ಹೊಸ ಕ್ಯಾಂಪಸ್‌

ನಾಗರಾಜ ಚಿನಗುಂಡಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿದ್ಯಾರ್ಥಿಗಳ ವೃತ್ತಿಪರ ಕೌಶಲ ತರಬೇತಿ ನೀಡುತ್ತಿರುವ ನಗರದ ‘ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ’ (ಕೆಜಿ ಟಿಟಿಐ) ವಿಶಾಲವಾದ ವಸತಿ ಸಹಿತ ಕ್ಯಾಂಪಸ್‌ ನಿರ್ಮಾಣ ಚುರುಕುಗೊಳಿಸಿದೆ.ಜೇವರ್ಗಿ ಕ್ರಾಸ್‌ ಸಮೀಪದ ಸರ್ಕಾರಿ ಐಟಿಐ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕೆಜಿಟಿಟಿಐ ನೆಲೆಯೂರಿದ್ದು, ಮೂಲ ಯೋಜನೆ ಶೇ 40ರಷ್ಟು ಕೋರ್ಸ್‌ಗಳಲ್ಲಿ ಮಾತ್ರ ತರಬೇತಿ ನೀಡಲಾಗುತ್ತಿದೆ. ನಗರದ ರಾಜಾಪುರ ರಸ್ತೆಯಲ್ಲಿ ಕೆಜಿಟಿಟಿಐ ಹೊಸ ಕ್ಯಾಂಪಸ್‌ಗೆ 20 ಎಕರೆ ಜಾಗ ಒದಗಿಸಲಾಗಿದೆ. ಈಗಾಗಲೇ ಕಟ್ಟಡ ಕಾರ್ಯಭರದಿಂದ ಸಾಗಿದ್ದು, 2015 ಅಗಸ್ಟ್‌ 15ರಂದು ನೂತನ ಕ್ಯಾಂಪಸ್‌ ಉದ್ಘಾ ಟಿಸಲು ಯೋಜಿಸಿದೆ.ಒಟ್ಟು 250 ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ದೊರೆಯಲಿದ್ದು, ಹೊಸ ಕ್ಯಾಂಪಸ್‌ನಲ್ಲಿ 1,600 ವಿದ್ಯಾರ್ಥಿ ಗಳಿಗೆ ತರಬೇತಿ ನೀಡಲು ಸಾಧ್ಯವಾ ಗಲಿದೆ. ಸದ್ಯಕ್ಕೆ ಅಲ್ಪಾವಧಿ ತರಬೇತಿ ಕೋರ್ಸ್‌ ಮಾತ್ರ ಇದ್ದು, ಹೊಸ ಕ್ಯಾಂಪಸ್‌ ಆರಂಭಗೊಂಡ ಬಳಿಕ ಮ್ಯಾನುಫೆಕ್ಚರಿಂಗ್‌, ವೆಲ್ಡಿಂಗ್‌, ಟೂಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕ್‌ ಮೆಂಟನನ್ಸ್‌ ಮತ್ತು ಸಿವಿಲ್‌ ಎಂಜಿನಿ ಯರಿಂಗ್‌ ದೀರ್ಘಾವಧಿ ತರಬೇತಿ ಕೋರ್ಸ್‌ ಕೂಡಾ ಆರಂಭವಾಗಲಿವೆ.‘ಗುಲ್ಬರ್ಗ ಸುತ್ತಮುತ್ತ ಹಾಗೂ ಉತ್ತರ ಕರ್ನಾಟಕದ ಕೈಗಾರಿಕೆಗಳನ್ನು ಗಮನದಲ್ಲಿಟ್ಟು ಕೊಂಡು ವಿದ್ಯಾರ್ಥಿ ಗಳಿಗೆ ಕೌಶಲ ತರಬೇತಿ ನೀಡಲಾಗು ವುದು. ಕೆಜಿಟಿಟಿಐಗೆ ಒಟ್ಟು 50 ತರಬೇತಿ ಸಿಬ್ಬಂದಿ ನೇಮಕಕ್ಕೆ ಅನುಮತಿಯಿದ್ದು, ಈಗ 20 ಸಿಬ್ಬಂದಿ ಇದ್ದಾರೆ. ಹೊಸ ಕ್ಯಾಂಪಸ್‌ಗೆ ಸ್ಥಳಾಂತ ರವಾದ ನಂತರ ಇನ್ನುಳಿದ 30 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಕೆಜಿಎಂಎಸ್‌ಡಿಸಿ ಮಾಡಲಿದೆ’ ಎನ್ನುತ್ತಾರೆ ಗುಲ್ಬರ್ಗ ಕೆಜಿಟಿಟಿಐ ನಿರ್ದೇಶಕ ಕೋಟಯ್ಯ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಪ್ರಮಾಣದ ಅನುದಾನದಲ್ಲಿ ಬೆಂಗಳೂರು ಹಾಗೂ ಗುಲ್ಬರ್ಗದಲ್ಲಿ 2011ರಲ್ಲಿ ಕೆಜಿಟಿಟಿಐ ಕಾರ್ಯಾ ರಂಭ ಮಾಡಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ ಓದಿದರೂ ಕೈಗಾರಿಕೆಗಳು ಬಯಸುವ ಅರ್ಹತೆ ಇಲ್ಲದೆ ಅನೇಕರು ನಿರುದ್ಯೋ ಗಿಗಳಾಗಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಅವರ ಅರ್ಹತೆಯನ್ನು ಆಧರಿಸಿ ಅಲ್ಪಾವಧಿಯಲ್ಲಿ ಕೌಶಲ ತರಬೇತಿ ನೀಡುವುದು ಇವುಗಳ ಸ್ಥಾಪನೆಯ ಉದ್ದೇಶ. ಅನೇಕ ಕಂಪೆನಿ ಗಳೊಂದಿಗೆ ಕೆಜಿಟಿಟಿಐ ಒಪ್ಪಂದ ಮಾಡಿಕೊಂ ಡಿದ್ದು, ತರಬೇತಿ ಪಡೆದ ವಿದ್ಯಾರ್ಥಿ ಗಳಿಗೆ ಕ್ಯಾಂಪಸ್‌ನಲ್ಲೆ ಕಂಪೆನಿಗಳು ಸಂದರ್ಶನ ಏರ್ಪಡಿಸಿ ಉದ್ಯೋಗಾವ ಕಾಶ ಕಲ್ಪಿಸುತ್ತಿವೆ.ಗುಲ್ಬರ್ಗದಲ್ಲಿ ಕೆಜಿಟಿಟಿಐ ಕೇಂದ್ರದಲ್ಲಿ ಇಲ್ಲಿಯ ವರೆಗೂ 1,600 ವಿದ್ಯಾರ್ಥಿ ಗಳು ವಿವಿಧ ಕೋರ್ಸ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. 350 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.ಕೆಜಿಟಿಟಿಐನಲ್ಲಿ ತರಬೇತಿ ಪಡೆದ ಬಹಳಷ್ಟು ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರ್ಪಡೆ ಗೊಂಡಿದ್ದಾರೆ. ವೃತ್ತಪರತೆ ಕೌಶಲದೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ಸಂವಹನ ವಿಧಾನ ಹಾಗೂ ಸಂದರ್ಶನ ಎದುರಿಸುವ ಬಗ್ಗೆಯೂ ಹೇಳಿಕೊಡ ಲಾಗುತ್ತದೆ. ಕಲಿತು ಉದ್ಯೋಗ ಹಿಡಿಯುವ ಹಂಬಲ ಇದ್ದವರಿಗೆ ಕೆಜಿಟಿಟಿಐ ಉತ್ತಮ ಸಂಸ್ಥೆಯಾಗಿ ಗಮನ ಸೆಳೆದಿದೆ. ಇಲ್ಲಿ ವಯಸ್ಸು, ಪ್ರದೇಶದ ನಿರ್ಬಂಧ ನೆಯಿಲ್ಲ, ರಾಜ್ಯದ ಯಾವುದೇ ಭಾಗದವರು ಅತ್ಯಾಧುನಿಕ ಕೈಗಾರಿಕಾ ಕೌಶಲದ ಬಗ್ಗೆ ತರಬೇತಿ ಪಡೆದುಕೊಳ್ಳಬಹುದು. ತರಬೇತಿ ಶುಲ್ಕದಲ್ಲಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಶೇ 20ರಷ್ಟು ರಿಯಾಯ್ತಿ ಕಲ್ಪಿಸಲಾಗಿದೆ.ಕೆಜಿಟಿಟಿಐ ಕೇಂದ್ರದಲ್ಲಿ ಸದ್ಯ ಬೇಸಿಕ್‌ ಕಂಪ್ಯೂಟರ್‌ ಕೋರ್ಸ್‌, ಸಿಸ್ಕೊ ಐಟಿ ಎಸೆನ್ಷಿ ಯಲ್‌, ಸಿಸಿಎನ್‌ಎ ಎಕ್ಸ್‌ಪ್ಲೋ ರೇಷನ್‌, ಅಡ್ವಾನ್ಸ್‌ ಡಿಪ್ಲೊಮಾ ಇನ್‌ ಐಟಿ, ಮ್ಯಾನು ಪ್ಯಾಕ್ಚರಿಂಗ್‌, ವೆಲ್ಡಿಂಗ್‌ ಟೆಕ್ನಿಕ್‌ ಕೋರ್ಸ್‌ಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 08472 252111. ವೆಬ್‌ಸೈಟ್‌ ವಿಳಾಸ: http:// www.kgtti. com/ gulbargaಪರಿಸರ ಸ್ನೇಹಿ ಕ್ಯಾಂಪಸ್‌

ಕೆಜಿಟಿಟಿಐನಲ್ಲಿ ಅತ್ಯಾಧುನಿಕ ಕ್ಲಾಸ್‌ರೂಂ ತರಬೇತಿ ಅಳವಡಿಸಲಾಗಿದೆ. ಕೈಗಾರಿಕೆಗಳಲ್ಲಿ ರೂಢಿಯಲ್ಲಿರುವ ಪದ್ಧತಿಗಳನ್ನೆ ಅಲ್ಲಿ ಅಳವಡಿಸಲಾಗಿದ್ದು, ಅಲ್ಲಿ ಪೂರ್ಣ ಪ್ರಮಾಣದಲ್ಲಿ ತರಬೇತಿ ಪಡೆದವರು ನೇರವಾಗಿ

ಉದ್ಯೋಗಕ್ಕೆ ಸೇರಿಕೊಳ್ಳಬಹುದು. ನಗರದ ಹೃದಯ ಭಾಗದಲ್ಲೆ ಸಂಪೂರ್ಣ ಪರಿಸರ ಸ್ನೇಹಿ ಕ್ಯಾಂಪಸ್‌ ನಿರ್ಮಾಣವಾಗುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

– ಎಂ.ಕೋಟಯ್ಯ, ನಿರ್ದೇಶಕರು, ಕೆಜಿಟಿಟಿಐ, ಗುಲ್ಬರ್ಗ

ಪ್ರತಿಕ್ರಿಯಿಸಿ (+)