ಮಂಗಳವಾರ, ಜನವರಿ 28, 2020
18 °C

‘ತಾಂತ್ರಿಕ ಕೃಷಿಯಿಂದ ಆದಾಯ ಹೆಚ್ಚಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರೈತರು ಕೃಷಿಯಲ್ಲಿ ತಾಂತ್ರಿಕತೆ ಯನ್ನು ಅಳವಡಿಸಿಕೊಂಡು ಮುಂದು ವರಿದರೆ ಆದಾಯ ಹೆಚ್ಚಿಸಿಕೊಳ್ಳಬ ಹುದು ಎಂದು ಜಂಟಿ ಕೃಷಿ ನಿರ್ದೇಶಕ ಜೀಲಾನಿ ಮೋಕಾಶಿ ಹೇಳಿದರು.ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಸಂಯುಕ್ತವಾಗಿ ಸೋಮವಾರ ಏರ್ಪಡಿ ಸಿದ್ದ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.ರೈತರ ನೆರವಿಗಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಹೊಸ ತಳಿಗಳ ಬಿತ್ತನೆ–ಪೋಷಣೆ ಬಗ್ಗೆ ತಿಳಿವಳಿಕೆ ನೀಡುವುದಕ್ಕೆ ಕೃಷಿ ವಿಜ್ಞಾನಿಗಳು ಸದಾ ಸಿದ್ಧರಿದ್ದಾರೆ. ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಮೂಲಕ ರೈತರು ತಾವು ಬೆಳೆಯುವ ಬೆಳೆಗಳಿಂದ ಹೆಚ್ಚಿನ ಆದಾಯ ಪಡೆಯ ಬಹುದಾಗಿದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜಿವಣಗಿ ಮಾತನಾಡಿ, ‘ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಿ ಕೊಳ್ಳಲು ಈಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದೆ ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯ ನೆರವು ನೀಡಲಾಗುತ್ತಿದೆ’ ಎಂದರು.ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಅವರು ಕಾರ್ಯ ಕ್ರಮ ಉದ್ಘಾಟಿಸಿದರು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಿತ್ರಶೇಖರ ಪರಶಿವಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ತೆಗ್ಗಳಿ, ಹಾಪ್‌ಕಾಮ್‌ ಮಾಜಿ ಅಧ್ಯಕ್ಷ ಶಿವಲಾಲಸಿಂಗ್‌ ಮಾತನಾಡಿದರು.ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾದ ಗುಂಡಪ್ಪ ದೂಳಗೊಂಡ ಹಾಗೂ ಪ್ರಗತಿಪರ ರೈತರಾದ ಚಾಂದಸಾಬ, ಶಾಂತವೀರ, ರುದ್ರಶೆಟ್ಟಿ ಹುಡಗಿ, ಮಲ್ಲಣ್ಣ ಶಿವಲಿಂಗಪ್ಪ ಹತ್ರಿ, ಸಂಗಣ್ಣ.ಎಮ್. ಚೆಲಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ತಾಲ್ಲೂಕ ಕೃಷಿಕ ಸಮಾಜದ ನಿರ್ದೇ ಶಕರಾದ ಮಲ್ಲಿಕಾರ್ಜುನ ಗಂಗಾಣೆ, ಉತ್ತಮ. ಪಾಟೀಲ, ಜಗದೀಶ. ಕೆ.ಪಾಟೀಲ, ಸತೀಶ ಪಾಟೀಲ, ಉಮಾ ಪತಿ ಪಾಟೀಲ ನಂದೂರ, ಶ್ಯಾಮ ನಾಟಿಕರ್ ಇದ್ದರು. ಜಿಲ್ಲೆಯ ಕೃಷಿ ಅನುವುಗಾರರು ಭಾಗವ ಹಿಸಿದ್ದರು.ಸಹಾಯಕ ಕೃಷಿ ಅಧಿಕಾರಿ ಗುರುರಾಜ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅಧಿಕಾರಿ ಮಧುಮತಿ ಪಾಟೀಲ ವಂದಿಸಿದರು.

ಪ್ರತಿಕ್ರಿಯಿಸಿ (+)