‘ಇದೇನ್ರೀ ಇದು, ಎಲ್ಲರೂ ಮುಂದೆ ಮುಂದೆ ಹೋಗ್ತಿದ್ರೆ ಇವರು ಹಿಂದೆ ಹಿಂದೆ ಹೋಗ್ತಿದಾರೆ’ ಪೇಪರ್ ಓದುತ್ತಾ ಹೇಳಿದಳು ಹೆಂಡತಿ.

‘ಯಾರಮ್ಮ, ಯಾರ ಬಗ್ಗೆ ಮಾತಾಡ್ತಿದ್ದೀಯ?’ ಪೇಪರ್ ಪುಟ ತಿರುಗಿಸುತ್ತಾ ಕೇಳಿದೆ.

‘ಜಿಬಿಎ ಎಲೆಕ್ಷನ್ಗೆ ಬ್ಯಾಲೆಟ್ ಪೇಪರ್ ಬಳಸ್ತಾರಂತೆ. ಬೆಂಗಳೂರಿನಂತ ಐಟಿ ಸಿಟಿ ಎಲೆಕ್ಷನ್ಗೆ ಪೇಪರ್ ಬಳಸಿದ್ರೆ ಸರಿ ಇರುತ್ತಾ?’

‘ಇವಿಎಂ ಬಳಸೋಕೆ ಬಿಟ್ರೆ ಗೋಲ್ಮಾಲ್ ನಡೆಯುತ್ತಂತಲ್ಲ, ಅದಕ್ಕೆ ಬ್ಯಾಲೆಟ್ ಪೇಪರ್ ಮೊರೆ ಹೋಗಿದ್ದಾರೆ ಬಿಡು’ ಎಂದೆ ಸಮಾಧಾನದಿಂದ.

‘ಬ್ಯಾಲೆಟ್ ಪೇಪರ್ ಬಳಸೋ ಎಲೆಕ್ಷನ್ನಲ್ಲೂ ಅಕ್ರಮ ಆಗುತ್ತೆ, ವೋಟಿಂಗ್ಗಿಂತ ಮೊದಲೇ ಡೀಲ್ ಆಗಿರುತ್ತೆ’ ನಗುತ್ತಾ ಹೇಳಿದಳು.

‘ಯಾವುದೂ ಬೇಡ ಅಂದ್ರೆ ಹೇಗಮ್ಮ? ಎಲೆಕ್ಷನ್ ಹೇಗೆ ನಡೆಸಬೇಕು ಅವರು?’

‘ಬಿಗ್ಬಾಸ್ನವರು ನಡೆಸ್ತಾರಲ್ಲ. ಒಂದು ಆ್ಯಪ್ ಮಾಡಿ ಅದರಲ್ಲೇ ವೋಟ್ ಹಾಕಿ ಅನ್ನೋದು. ಒಬ್ಬರಿಗೆ 99 ವೋಟ್ ಹಾಕೋಕೆ ಅವಕಾಶ ಕೊಡೋದು’ ಎಂದು ಹೊಸ ಐಡಿಯಾ ಕೊಟ್ಟಳು.

‘ಒಬ್ಬೊಬ್ಬರು 99 ವೋಟ್ ಹಾಕೋದಾ?!’ ಅಚ್ಚರಿಯಿಂದ ಕೇಳಿದೆ.

‘ಹೂಂ, ಆಗ ಗೆದ್ದವರಿಗೂ ಒಂದು ಖುಷಿ ಇರುತ್ತೆ. ನಾನು 40 ಕೋಟಿ ವೋಟ್ ತಗೊಂಡೆ, 50 ಕೋಟಿ ಮತಗಳಿಂದ ಗೆದ್ದೆ ಅಂತ ಹೇಳಬಹುದು’.

‘ಎರಡು–ಮೂರು ಸಿಮ್ ಇದ್ದವರು ಎರಡು–ಮೂರು ಬಾರಿ ವೋಟ್ ಮಾಡ್ಬಿಟ್ರೆ’.

‘ಮೊಬೈಲ್ ನಂಬರ್ ಅಲ್ಲ, ಆಧಾರ್ ನಂಬರ್ ಆಧಾರದ ಮೇಲೆ ವೋಟಿಂಗ್. ಒಂದು ಆಧಾರ್ ಸಂಖ್ಯೆಗೆ ಒಂದು ಬಾರಿ ಅವಕಾಶ ಅಂತ’ ಎಂದಳು.

‘ಐಡಿಯಾ ಚೆನ್ನಾಗಿದೆ. ಮುಂದೆ ನಮ್ ಹೊಸ ಸಿಎಂ ಅವರನ್ನೂ ಹೀಗೆ ಆಯ್ಕೆ ಮಾಡಿಕೊಂಡ್ರೆ ಚೆನ್ನಾಗಿರುತ್ತಲ್ವ?’

‘ಮಾಡಬಹುದು. ಆದರೆ, ಆನ್ಲೈನ್ ವೋಟಿಂಗ್ ಜೊತೆಗೆ ನೋಟಿಂಗ್ ಕೂಡ ಇರಬೇಕು’.

‘ನೋಟಿಂಗ್ ಅಂದ್ರೆ?’

‘ಸಿಎಂ ಹುದ್ದೆಗೆ 2,500 ಕೋಟಿ ರೂಪಾಯಿ ಕೊಡಬೇಕಾಗುತ್ತೆ ಅಂತ ಹಿಂದೆ ಒಬ್ಬರು ಹೇಳಿದ್ರಲ್ಲ, ಅದೇ ನೋಟಿಂಗ್’ ಎಂದು ನಕ್ಕಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.