‘11ರಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂವಾದ’

7

‘11ರಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂವಾದ’

Published:
Updated:

ಗುಲ್ಬರ್ಗ: ನಗರದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಜ.11ರಂದು 11ಗಂಟೆಗೆ ನಗರದಲ್ಲಿ ಸಂವಾದಗೋಷ್ಠಿ ಏರ್ಪಡಿಸಲಾಗಿದೆ ಎಂದು ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.ನಗರದ ಆಯಾ ಬಡಾವಣೆಗಳ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಂವಾದ ಗೋಷ್ಠಿಯಲ್ಲಿ ಸಚಿವರಿಗೆ ಪ್ರಶ್ನೆಗಳನ್ನು ಕೇಳಲು ನಗರದ ಐವಾನ್‌–ಇ–ಶಾಹಿಯ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ರಸ್ತೆಯಲ್ಲಿರುವ ಹೈ.ಕ. ಜನಪರ ಸಂಘರ್ಷ ಸಮಿತಿ ಕಚೇರಿಯಲ್ಲಿ ಜ.8ರಂದು ಸಂಜೆ 5 ಗಂಟೆ ವರೆಗೆ ಲಿಖಿತ ರೂಪದಲ್ಲಿ ಬರೆದು ಕೊಡಬೇಕು.ಹೆಚ್ಚಿನ ಮಾಹಿತಿಗೆ 9342659766, 8951458965 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗುಲ್ಬರ್ಗ ನಗರವು ಮಹಾನಗರ ಪಾಲಿಕೆಯಾಗಿ ಬಡ್ತಿ ಪಡೆದು 29 ವರ್ಷ ಕಳೆದಿವೆ.ಆದರೆ, ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ, ಒಳಚರಂಡಿ, ಶೌಚಾಲಯ ಇಲ್ಲದಿರುವುದು ವಿಪರ್ಯಾಸ. ನಗರದ ಕೆಲವೆಡೆ ನಲ್ಲಿಗಳಲ್ಲಿ ಚರಂಡಿ ನೀರು ಸೇರ್ಪಡೆಯಾಗಿ ಪೂರೈಕೆಯಾಗುತ್ತಿದೆ.ಸಾರ್ವಜನಿಕರು ಸಮಸ್ಯೆಗಳ ಕುರಿತು ಪಾಲಿಕೆ ಸದಸ್ಯರಿಗೆ ದೂರು ಸಲ್ಲಿಸಿದರೆ, ಪಾಲಿಕೆಯಲ್ಲಿ ನಮಗೆ ಅಧಿಕಾರ ದೊರೆತಿಲ್ಲ ಎಂದು ನುಣುಚಿಕೊಳ್ಳುತ್ತಾರೆ ಎಂದು ಅಪಾದಿಸಿದರು.ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಗುಲ್ಬರ್ಗ ಮಹಾನಗರ ಅಭಿವೃದ್ಧಿಗೆ ₨200 ಕೋಟಿ ಮಂಜೂರು ಮಾಡಲಾಗಿದೆ. ಅದರಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 150 ಕೋಟಿ ಹಣದಲ್ಲಿ ₨25 ಕೋಟಿ ರೈಲ್ವೆ ಕಾಮಗಾರಿ ಮತ್ತು ಇತರೆ ಕಾಮಗಾರಿಗೆ ನಿಗದಿ ಮಾಡಲಾಗಿದೆ.

ಉಳಿದ 125 ಕೋಟಿ ಹಣವನ್ನು ರಸ್ತೆ ಮತ್ತು ಒಳಚರಂಡಿ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ನಗರದ ಎಲ್ಲ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿವೆ ಎಂದು ದೂರಿದರು.ನಗರದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂವಾದಗೋಷ್ಠಿ ಏರ್ಪಡಿಸಲಾಗಿದ್ದು, ನಾಗರಿಕರು ಸಹಕರಿಸಬೇಕು ಎಂದು ಮನವಿ   ಮಾಡಿದರು. ಸಮಿತಿ ವಕ್ತಾರ ನಾಗಲಿಂಗಯ್ಯ ಮಠಪತಿ, ಮೀರಾಜುದ್ದೀನ್ ಪಟೇಲ್‌, ಶಾಂತಪ್ಪ, ಲಿಂಗಣ್ಣ ಉದನೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry