ಬಂಡೆ ಧೈರ್ಯ, ಶೌರ್ಯ ಶ್ಲಾಘನೀಯ

7
ಎಡಿಜಿಪಿ ಎಂ.ಎನ್.ರೆಡ್ಡಿ ಹೇಳಿಕೆ

ಬಂಡೆ ಧೈರ್ಯ, ಶೌರ್ಯ ಶ್ಲಾಘನೀಯ

Published:
Updated:

ಗುಲ್ಬರ್ಗ:  ‘ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರ ಧೈರ್ಯ, ಶೌರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್.ರೆಡ್ಡಿ ಹೇಳಿದರು.‘ಭೂಗತಲೋಕದ ಪಾತಕಿಗಳೊಂದಿಗೆ ನಂಟು ಹೊಂದಿದ್ದ ರೌಡಿ ಮುನ್ನಾನನ್ನು ಬಂಧಿಸಲು ಕಾರ್ಯಾಚರಣೆಗೆ ತೆರಳಿದ್ದ ಬಂಡೆ ಅಪ್ರತಿಮ ಧೈರ್ಯ ಪ್ರದರ್ಶಿಸಿದ್ದಾರೆ. ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಪದಕ ಹಾಗೂ ನಗದು ಬಹುಮಾನ ನೀಡುವ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರೌಡಿ ಮುನ್ನಾ ರೋಜಾ ಬಡಾವಣೆಯಲ್ಲಿ ಇರುವ ಸಂಗತಿ ಮೊದಲೇ ಗೊತ್ತಾಗಿತ್ತು. ಆತನನ್ನು ಬಂಧಿಸಲು ಪೊಲೀಸರು ಎರಡು ತಿಂಗಳಿನಿಂದ ಸತತ ಪ್ರಯತ್ನ ನಡೆಸಿದ್ದರು.ಆದರೆ, ಆತ ಪ್ರತಿದಾಳಿ ಮಾಡುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಹೀಗಾಗಿ ಅನಾಹುತ ಸಂಭವಿಸಿದೆ. ಆದಾಗ್ಯೂ, ನಮ್ಮ ಅಧಿಕಾರಿಗಳ ಕಾರ್ಯವೈಖರಿ ಇಲಾಖೆಗೆ ಹೆಮ್ಮೆ ತಂದಿದೆ. ಜತೆಗೆ ರೌಡಿಗಳಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ’ ಎಂದು ಹೇಳಿದರು.ರೌಡಿ ಹೊಸಪಟ್ಟಿ

‘ರಾಜ್ಯದಾದ್ಯಂತ ಹೊಸ ರೌಡಿ ಶೀಟರ್ ಪಟ್ಟಿ ತಯಾರಿಸಲಾಗುತ್ತಿದೆ. ಸಣ್ಣಪುಟ್ಟ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೂ ರೌಡಿ ಶೀಟರ್ ಪಟ್ಟಿಗೆ ಸೇರಿಸಲಾಗುವುದು. ಅಕ್ರಮ ಚಟುವಟಿಕೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಯಾರೇ ಮುಂದಾದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.ವಿಶೇಷ ತರಬೇತಿ

‘ಪ್ರತಿ ಜಿಲ್ಲೆಯಲ್ಲಿ 10–15 ಪೊಲೀಸರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಅವರಿಗೆ ತರಬೇತಿ ನೀಡಲಾಗುವುದು. ಇಂತಹ ವಿಶೇಷ ಕಾರ್ಯಾಚರಣೆ ಸಂದರ್ಭದಲ್ಲಿ ಈ ತಂಡದ ನೆರವು ಪಡೆಯಲಾಗುವುದು. ಬೆಂಗಳೂರಿನ ಗರುಡ ಮಾದರಿಯಲ್ಲಿ ಈ ತಂಡ ಕಾರ್ಯಾಚರಣೆ ನಡೆಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಮಹಮ್ಮದ್ ವಜೀರ್ ಅಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶೀನಾಥ ತಳಕೇರಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry