ಶನಿವಾರ, ಜೂನ್ 12, 2021
24 °C

ಪಿಯು ಫಲಿತಾಂಶ ಹೆಚ್ಚಳಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ : ಗ್ರಾಮೀಣ ಭಾಗದಲ್ಲಿ ಪಿಯುಸಿ ದ್ವಿತೀಯ ವರ್ಷದ ಫಲಿ­ತಾಂಶ ಕಡಿಮೆಯಾಗುತ್ತಿದೆ. ಅದನ್ನು ಹೆಚ್ಚಿಸಲು ಉಪನ್ಯಾಸಕರು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಗುಲ್ಬರ್ಗ ಪದವಿ ಪೂರ್ವ ಇಲಾಖೆಯ ಉಪ ನಿರ್ದೇಶಕರಾದ ಸಾಳುಂಕೆ­ಯವರು ತಿಳಿಸಿದರು.ಮಹಾಂತಮ್ಮ ಪಾಟೀಲ ಸ್ವತಂತ್ರ ಪದವಿ ಪೂರ್ವ ಕಾಲೇಜ್‌ಕ್ಕೆ ಬುಧ­-ವಾರ ಭೇಟಿ ನೀಡಿ ವಿಜ್ಞಾನ ವಿಭಾಗದ ಪ್ರಯೋಗಾಲಯದ ಪರಿಕರಗಳನ್ನು ಮತ್ತು ಕಾಲೇಜ್‌ ಕಟ್ಟಡ, ಶೌಚಾ­ಲಯ ವ್ಯವಸ್ಥೆ, ವಾಚನಾಲ­ಯವನ್ನು ಪರಿಶೀಲಿಸಿದರು. ನಂತರ ಉಪನ್ಯಾಸ­ಕರ ಸಭೆ ನಡೆಸಿದರು.ಸಹ ನಿರ್ದೇಶಕರಾದ ಎಲೆಮನಿ­ಯವರು ಸಭೆಯಲ್ಲಿ ಮಾತನಾಡಿ ಈಗ ಅಫಜಲಪುರದಲ್ಲಿ ಪರೀಕ್ಷೆಗಳು ಚೆನ್ನಾಗಿ ನಡೆಯುತ್ತಿವೆ. ಇದೇ ರೀತಿ ನಡೆಸಿಕೊಂಡು ಹೋಗಬೇಕು. ಇದ­ರಿಂದ ಕಾಲೇಜ್‌ನ ಫಲಿತಾಂಶವು ಏರಿಕೆಯಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಳವಾಗುತ್ತದೆ ಎಂದು ಅವರು ತಿಳಿಸಿದರು.ಹಿಂದಿ ಉಪನ್ಯಾಸಕ ಸಭೆಯಲ್ಲಿ ಮಾತನಾಡಿ ಅನುದಾನ ಪಡೆದ ಕಾಲೇಜ್‌ಗಳಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಸೇವಾ ಹಿರಿತನ ಪರಿ­ಗಣಿಸಿ ಅನುದಾನ ನೀಡಬೇಕೆಂದು ಕೇಳಿ­ಕೊಂಡರು ಇದಕ್ಕೆ ಉಪ ನಿರ್ದೇಶಕರು ಸರ್ಕಾರ 1995ರ ವರೆಗೆ ಕಾಲೇ­ಜ್‌ಗಳಿಗೆ ಅನುದಾನ ನೀಡಿದೆ. ಆ ಅವ­ಧಿಯಲ್ಲಿ ತಾವು ಕಾಲೇಜ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಅನುದಾನಕ್ಕೆ ಒಳ ಪಡು­ತ್ತದೆ ಎಂದು ಅವರು ತಿಳಿಸಿದರು.ಸಭೆಯಲ್ಲಿ ಉಪ ನಿರ್ದೇಶಕರ ಕಚೇರಿಯ ಬಸವರಾಜ, ಪ್ರಾಚಾ­ರ್ಯರಾದ ಈಶ್ವರ ಅಂಜುಟಗಿ, ಉಪ­ನ­್ಯಾಸಕರುಗಳಾದ ಎಂ.ವೀರನಗೌಡ, ಗುರುಶಾಂತ ಹೂಗಾರ, ಹುಕ್ಮುಚಂದ ಕೋಳೆಕರ, ಶ್ರೀಮಂತವಾಡಿ, ಸುರೇಶ ಗಣಿಯಾರ,  ಅಶೋಕ ತಂಬಾಕೆ, ಶಿವಾನಂದ ಹಸರಗುಂಡಗಿ, ರಾಜೇಶ್ವರಿ ಹಿರೇಮಠ, ಹಿರಿಯ ಕರ್ಣಿಕರಾದ ಮುಲಗೆ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.