ಶನಿವಾರ, ಫೆಬ್ರವರಿ 27, 2021
31 °C

ಗುಲ್ಬರ್ಗ: ಮಳೆಗೆ ಮನೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಳೆಗೆ ಮನೆ ಕುಸಿತ

ಗುಲ್ಬರ್ಗ: ಗುರುವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ಶುಕ್ರವಾರ ಬೆಳಗಿನವರೆಗೂ ಬಿದ್ದಿದೆ. ಇದರಿಂದ ನಗರದಲ್ಲಿ ಮನೆಯೊಂದು ಸುರಿದಿದೆ. ಮೇ 1ರಿಂದ 8ರ ವರೆಗೂ ಜಿಲ್ಲೆಯಲ್ಲಿ ಒಟ್ಟು 101 ಮಿಲಿ ಮಿೀಟರ್‌ ಮಳೆ ಪ್ರಮಾಣ ದಾಖಲಾಗಿದೆ.ಗುಲ್ಬರ್ಗ ಮಕ್ತಂಪುರ ಪ್ರದೇಶದಲ್ಲಿರುವ ರೋಷನ್‌ ಮಸೀದಿಗೆ ಹೊಂದಿಕೊಂಡು ಪಾಳುಬಿದ್ದಿದ್ದ ಮನೆಯೊಂದು ಶುಕ್ರವಾರ ಬೆಳಿಗ್ಗೆ ಕುಸಿದಿದೆ. ಮಸೀದಿಯಲ್ಲಿ ಅನೇಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಮನೆ ಕುಸಿತವಾದ ಸಮಯದಲ್ಲಿ ಮಕ್ಕಳು ಆಟಕ್ಕೆ ತೆರಳಿದ್ದರು. ಹೀಗಾಗಿ ಅಪಾಯ ಸಂಭವಿಸುವುದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ. ಹಾಳುಬಿದ್ದಿರುವ ಮನೆಯನ್ನು ಸಂಪೂರ್ಣ ತೆರವುಗೊಳಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಶುಕ್ರವಾರವೇ ಆರಂಭಿಸಿದ್ದಾರೆ.ಜಿಲ್ಲೆಯಲ್ಲಿ ಮೇ ತಿಂಗಳ ವಾಡಿಕೆ ಮಳೆ 39.7 ಮಿ.ಮೀ ರಷ್ಟಿತ್ತು. ಆದರೆ ಈಗ ಸುರಿದ ಮಳೆ ಅಗಾಧವಾಗಿದೆ. ಆಳಂದ ತಾಲ್ಲೂಕಿನಲ್ಲಿ ವಾಡಿಕೆ ಮಳೆ 39.8 ಮಿ.ಮೀ ಇದ್ದು, ಮೇ 8ರ ವರೆಗೂ 128.8 ಮಿ.ಮೀ ಅತಿಹೆಚ್ಚು ಮಳೆಯಾಗಿದೆ.ಗುಲ್ಬರ್ಗ ತಾಲ್ಲೂಕಿನಲ್ಲಿ 109.8 ಮಿ.ಮೀ ಎರಡನೇ ಅತಿಹೆಚ್ಚು ಮಳೆ ಸುರಿದಿದೆ. ಅಫಜಲಪುರ ಮತ್ತು ಚಿಂಚೋಳಿ ತಾಲ್ಲೂಕುಗಳಲ್ಲಿ 101 ಮಿ.ಮೀ ಮಳೆಯಾಗಿದೆ. ಮೇ 1ರಿಂದ 8ವರೆಗೂ ಸುರಿದ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಜೇವರ್ಗಿ ಮತ್ತು ಸೇಡಂ ತಾಲ್ಲೂಕುಗಳಲ್ಲಿ ಕ್ರಮವಾಗಿ 78.2 ಮಿ.ಮೀ ಮತ್ತು 70.9 ಮಿ.ಮೀ ಮಳೆಯಾಗಿದೆ.

ಚಿತ್ತಾಪುರ ತಾಲ್ಲೂಕಿನಲ್ಲಿ 97.3 ಮಿ.ಮೀ ಮಳೆ ಸುರಿದಿದೆ. ‘ಮುಂಗಾರು ಮಾರುತದಿಂದ ಮಳೆ ಬರುವುದು ಇನ್ನೂ ತುಂಬಾ ದೂರ ಇದೆ. ಈಗ ಬೀಳುತ್ತಿರುವ ಮಳೆಗೆ ಬಹುಶಃ ಚಂಡಮಾರುತ ಕಾರಣ ಇರಬಹುದು. ಮಳೆ ಬೀಳುತ್ತಿರುವುದು ನಮಗೂ ಅಚ್ಚರಿ ಮೂಡಿಸಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ಅವರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.