ಭಾನುವಾರ, 22–5–1994

ಬುಧವಾರ, ಜೂನ್ 19, 2019
23 °C

ಭಾನುವಾರ, 22–5–1994

Published:
Updated:

ಭಾರತದ ಸುಸ್ಮಿತಾ ಸೆನ್ ಈಗ ವಿಶ್ವ ಸುಂದರಿ

ಮನಿಲಾ, ಮೇ 21 (ಎಪಿ)– ಹದಿನೆಂಟರ ಹರೆಯದ ಕಪ್ಪು ಕಣ್ಣಿನ ಚೆಲುವೆ ಸುಸ್ಮಿತಾ ಸೆನ್ ಇಂದು ಇಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದರು.

ಈಕೆ ವಿಶ್ವ ಸುಂದರಿ ಪಟ್ಟಕ್ಕೇರಿದ ಎರಡನೇ ಭಾರತೀಯ ಯುವತಿ. ಕೆಲ ವರ್ಷ ಹಿಂದೆ ಭಾರತದ ಇನ್ನೊಬ್ಬ ಸುಂದರಿ ರೀಟಾ ಫಾರಿಯಾ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು.

‌ಭಾರತ ಪರ ಕ್ಲಿಂಟನ್ ನಿಲುವು

ವಾಷಿಂಗ್ಟನ್, ಮೇ 21 (ಪಿಟಿಐ)– ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಭಾರತದ ವಿರುದ್ಧ ಮಾಡುತ್ತಿರುವ ಆರೋಪವನ್ನು ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ನಿರಾಕರಿಸಿದ್ದಾರೆ.

ಪ್ರಧಾನಿ ಪಿ.ವಿ. ನರಸಿಂಹರಾವ್ ಅವರೊಂದಿಗೆ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಮಹತ್ವದ ಈ ನಿರಾಕರಣೆ ಮಾಡಿದರು. ಆದರೆ ಮಿಕ್ಕ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಉಂಟಾಗಿದ್ದ ಸಂಭ್ರಮದಲ್ಲಿ ಇದು ಯಾರ ಗಮನಕ್ಕೂ ಅಷ್ಟಾಗಿ ಬರಲಿಲ್ಲ.

ಸಚಿವ ಮಂಜುನಾಥ್ ನಿಧನ

ಬೆಂಗಳೂರು, ಮೇ 21– ಮದ್ರಾಸ್‌ನ ಖಾಸಗೀ ಆಸ್ಪತ್ರೆಯೊಂದರಲ್ಲಿ ಇಂದು ಮುಂಜಾನೆ ಸುಮಾರು 2.20ಕ್ಕೆ ನಿಧನರಾದ ರಾಜ್ಯದ ಸಕ್ಕರೆ ಖಾತೆ ಸಚಿವ ಟಿ.ಎಂ. ಮಂಜುನಾಥ್ (61) ಅವರ ಪಾರ್ಥಿವ ಶರೀರವನ್ನು ಇಂದು ಇಲ್ಲಿಗೆ ತಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗಾಗಿ ತಿಪ‍ಟೂರಿಗೆ ಸಂಜೆ ಕಳಿಸಿ ಕೊಡಲಾಯಿತು.

ಸರ್ಕಾರಿ ಗೌರವದೊಂದಿಗೆ ನಾಳೆ ಅಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರು ಪತ್ನಿ ಅನ್ನಪೂರ್ಣಮ್ಮ, ಪುತ್ರಿಯರಾದ ಮಂಗಳ ಮತ್ತು ಅನುಪಮ ಅವರನ್ನು ಆಗಲಿದ್ದಾರೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !