ಭಾನುವಾರ, 5–12–1993

7

ಭಾನುವಾರ, 5–12–1993

Published:
Updated:

ಲೋಕ ಅದಾಲತ್‌ಗೆ ಶೀಘ್ರ ಶಾಸನಬದ್ಧ ಸ್ಥಾನ

ನವದೆಹಲಿ, ಡಿ. 4 (ಪಿಟಿಐ)– ಕಾಯ್ದೆ ವಿವಾದಗಳ ಪರಿಹಾರದಲ್ಲಿ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ನೆರವಾಗಿರುವ ಲೋಕ ಆದಾಲತ್‌ಗಳಿಗೆ ಶೀಘ್ರವೇ ಶಾಸನಬದ್ಧ ಸ್ಥಾನಮಾನ ನೀಡಲಾಗುವುದು ಎಂದು ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಪ್ರಕಟಿಸಿದರು.

‌ಸರ್ಕಾರಿ ಉದ್ದಿಮೆ ಖಾಸಗಿಗೆ ಟೀಕೆ

ನವದೆಹಲಿ, ಡಿ. 4 (ಪಿಟಿಐ)– ಸರ್ಕಾರಿ ಉದ್ದಿಮೆಗಳಲ್ಲಿ ಶೇಕಡಾ 51ರಷ್ಟು ಷೇರುಗಳನ್ನು ಹೊಂದಲು ಖಾಸಗಿಯವರಿಗೆ ಅವಕಾಶ ನೀಡಬೇಕೆಂಬ ಪ್ರಸ್ತಾಪವನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.

ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರು ಇಂದು ಕರೆದ ಬಜೆಟ್ ಪೂರ್ವ ಚರ್ಚಾ ಸಭೆಯಲ್ಲಿ ಪಾಲ್ಗೊಂಡ ವಿವಿಧ ಕಾರ್ಮಿಕ ಸಂಘಟನೆಗಳ ನಾಯಕರು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. .

ಡಿ. 6: ಮುನ್ನೆಚ್ಚರಿಕೆಯಾಗಿ ಸೇನೆ ಸಜ್ಜು

ಬೆಂಗಳೂರು, ಡಿ. 4– ಕಳೆದ ವರ್ಷ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ಪ್ರತಿಕ್ರಿಯೆಯಾಗಿ ದೇಶಾದ್ಯಂತ ನಡೆದ ಹಿಂಸಾ
ಚಾರಗಳು ಡಿ. 6ರಂದು ಮರುಕಳಿಸದಂತೆಎಚ್ಚರ ವಹಿಸಲು ರಾಜ್ಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆ ಸಜ್ಜಾಗಿ ನಿಂತಿದೆ.

ನೀರಿನ ಪಾಲು ದಕ್ಕದಿದ್ದರೆಸಚಿವರೇ ಹೊಣೆ– ವಿಶ್ವನಾಥ್

ಬೆಂಗಳೂರು, ಡಿ. 4– ಈ ಶತಮಾನದ ಒಳಗೆ ರಾಜ್ಯದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದರೆ ಅದಕ್ಕೆ ರಾಜ್ಯದ ನೀರಾವರಿ ಸಚಿವರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಎಚ್‌. ವಿಶ್ವನಾಥ್ ಇಂದು ಇಲ್ಲಿ ಎಚ್ಚರಿಕೆ ನೀಡಿದರು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !