ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಸ್‌ ಜೊತೆಗೆ ಕಾರ್ತಿಕ್‌: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊಗಳು

ಪೆನ್‌ಡ್ರೈವ್‌ ಪ್ರಕರಣ: ದಿನಕ್ಕೊಂದು ತಿರುವು
Published 8 ಮೇ 2024, 7:08 IST
Last Updated 8 ಮೇ 2024, 7:08 IST
ಅಕ್ಷರ ಗಾತ್ರ

ಹಾಸನ: ‍ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ಕಾರು ಚಾಲಕ ಕಾರ್ತಿಕ್‌ ಅವರನ್ನು ಹಾಸನ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಅವರನ್ನು ಭೇಟಿಯಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಬಿಜೆಪಿ ಮುಖಂಡ ಜಿ. ದೇವರಾಜೇಗೌಡ, ‘ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಅವರ ಮೂಲಕ ಕಾರ್ತಿಕ್‌ ಪೆನ್‌ಡ್ರೈವ್‌ ಅನ್ನು ಕಾಂಗ್ರೆಸ್‌ ಮುಖಂಡರಿಗೆ ಕೊಟ್ಟಿರಬಹುದು’ ಎಂದು ಆಪಾದಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಶ್ರೇಯಸ್‌ ‍ಪಟೇಲ್‌, ’ನಾನು, ಕಾರ್ತಿಕ್‌ ಸೇರಿದಂತೆ ಯಾರನ್ನೂ ಭೇಟಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರೊಂದಿಗೆ ಕಾರ್ತಿಕ್‌ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲ ದಿನಗಳ ಹಿಂದೆ ಕಾರ್ತಿಕ್, ಪುಟ್ಟಿ ಅಲಿಯಾಸ್ ಪುಟ್ಟರಾಜು ಅವರು ಶ್ರೇಯಸ್ ಪಟೇಲ್ ಅವರನ್ನು ಹೊಳೆನರಸೀಪುರದ ಅವರ ನಿವಾಸದಲ್ಲೇ ಭೇಟಿಯಾಗಿದ್ದಾರೆ.

‘ಒಮ್ಮೆ ಮಾತ್ರ ಜಮೀನು ವಿಚಾರವಾಗಿ ಕಾರ್ತಿಕ್ ನನ್ನನ್ನು ಭೇಟಿಯಾಗಿದ್ದರು. ಅದಾದ ಮೇಲೆ ಕಾರ್ತಿಕ್ ನನಗೆ ಸಿಕ್ಕಿಲ್ಲ. ಫೋನ್ ಮಾಡಿಲ್ಲ’ ಎಂದು ಶ್ರೇಯಸ್ ಪಟೇಲ್ ಹೇಳಿದ್ದರು.

ಇದೀಗ ಶ್ರೇಯಸ್‌ ಪಟೇಲ್ ಅವರು, ಕಾರ್ತಿಕ್, ಪುಟ್ಟರಾಜು ಜೊತೆಗೆ ಕೈ ಕೈ ಹಿಡಿದು ನಿಂತಿರುವ ಫೋಟೋಗಳು ಹರಿದಾಡುತ್ತಿದ್ದು, ಪೆನ್‌ಡ್ರೈವ್‌ ಬಹಿರಂಗ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT