ಬೆಂಗಳೂರು: ಆರು ವರ್ಷಕ್ಕೆ ಕಾಲಿಟ್ಟಿರುವ ಮಗ ಯಥರ್ವ ಹುಟ್ಟುಹಬ್ಬವನ್ನು ನಟ ಯಶ್ ಮತ್ತು ರಾಧಿಕಾ ದಂಪತಿ ವಿಶಿಷ್ಟವಾಗಿ ಆಚರಿಸಿದ್ದು, ಮಗನಿಗೋಸ್ಕರ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.

ಈ ಕುರಿತು ವಿಡಿಯೊವನ್ನು ರಾಧಿಕಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಾವು, ಗಿಳಿ, ಊಸರವಳ್ಳಿ, ಆಮೆ ಸೇರಿದಂತೆ ವಿವಿಧ ಪ್ರಾಣಿಗಳೊಂದಿಗೆ ಸಹೋದರಿ ಐರಾ ಜತೆ ಸೇರಿ ಯಥರ್ವ ಆಟವಾಡಿದ್ದಾರೆ. ಅವುಗಳನ್ನು ಹಿಡಿದುಕೊಳ್ಳುವ ಮೂಲಕ ಪ್ರಾಣಿಗಳ ಬಗೆಗಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ಈ ವಿಶೇಷ ಸಂದರ್ಭದಲ್ಲಿ ಐರಾ–ಯಥರ್ವ ಸ್ನೇಹಬಳಗವೂ ಭಾಗವಹಿಸಿದ್ದು, ಯಥರ್ವ ಜೊತೆ ಆ ಮಕ್ಕಳು ಪ್ರಾಣಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಪರಿಸರ ಪ್ರೇಮಿಯಾಗಿರುವ ಯಥರ್ವನ ಹುಟ್ಟುಹಬ್ಬವನ್ನು ಈ ರೀತಿಯಾಗಿ ಆಚರಿಸಲು ನಿರ್ಧರಿಸಿದ್ದಾಗಿ ಹೇಳಿರುವ ರಾಧಿಕಾ, ಈ ಸಂದರ್ಭದಲ್ಲಿ ಯಾವುದೇ ಪ್ರಾಣಿ–ಪಕ್ಷಿಗಳ ಜೀವಕ್ಕೆ ಹಾನಿ ಮಾಡಿಲ್ಲ ಎಂದೂ ತಿಳಿಸಿದ್ದಾರೆ.

ಇನ್ನು, ಹುಟ್ಟುಹಬ್ಬ ನಡೆಯುತ್ತಿರುವ ಸ್ಥಳವನ್ನು ಕಾಡಿನ ರೀತಿ ವಿನ್ಯಾಸ ಮಾಡಲಾಗಿದ್ದು, ಮಕ್ಕಳಿಗೆಂದೇ ಹಲವು ರೀತಿಯ ಆಟಗಳನ್ನು ಆಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.