ಸಹಾಯಕ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ
₹1.36 ಕೋಟಿ ಆಸ್ತಿ ಪತ್ತೆ

ಕಲಬುರ್ಗಿ: ಯಾದಗಿರಿ ಜಿಲ್ಲೆ ಶಹಾಪುರದ ಕೃಷ್ಣಾ ಜಲ ನಿಗಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮಂತ ಧನ್ನಿ ಅವರಿಗೆ ಸೇರಿದ ಕಲಬುರ್ಗಿಯ ಮನೆ ಹಾಗೂ ಶಹಾಪುರದ ದೋರನಹಳ್ಳಿಯ ಕಚೇರಿ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದರು.
ಯಾದಗಿರಿ ಲೋಕಾಯುಕ್ತ ಎಸ್ಪಿ ಹನುಮೇಶ ನೇತೃತ್ವದ ತಂಡ ಕಲಬುರ್ಗಿಯ ಶಕ್ತಿನಗರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿತು.‘₹ 1 ಕೋಟಿ ಮೌಲ್ಯದ ಮನೆ, ಬ್ಯಾಂಕ್ ಖಾತೆಗಳು, ₹ 41 ಸಾವಿರ ನಗದು, 260 ಗ್ರಾಂ ಚಿನ್ನಾಭರಣ, ಒಂದು ಕಾರು ಹಾಗೂ ಒಂದು ಬೈಕ್ ಸೇರಿದಂತೆ ₹ 1.36 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ’ ಎಂದು ಲೋಕಾಯುಕ್ತ ಎಸ್ಪಿ ಹನುಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.