ಸೋಮವಾರ, ಮಾರ್ಚ್ 8, 2021
22 °C
ನಾಗರಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಸಲಹೆ

ಮೌಢ್ಯದಿಂದ ಹೊರಬನ್ನಿ, ರಕ್ತದಾನ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಢ್ಯದಿಂದ ಹೊರಬನ್ನಿ, ರಕ್ತದಾನ ಮಾಡಿ

ಕಲಬುರ್ಗಿ: ‘ಜನ ಮೌಢ್ಯದಿಂದ ಹೊರ ಬಂದು ರಕ್ತದಾನ ಮಾಡುವುದರಿಂದ ಸಾಕಷ್ಟು ಜನರ ಜೀವ ಉಳಿಸ ಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಅಂಗವಾಗಿ ಭಾನುವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ವಿಶೇಷ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.‘24 ಗಂಟೆ ಜನರಿಗೆ ರಕ್ಷಣೆ ನೀಡುವ ಪೊಲೀಸ್ ಇಲಾಖೆ ಸಮಾಜ ಸೇವೆ ಜತೆಗೆ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಪೊಲೀಸ್ ಸಿಬ್ಬಂದಿ ರಕ್ತ ದಾನದಿಂದ ಸಮಾಜ ಹೆಮ್ಮೆಪಡುವ ಕೆಲಸ ಮಾಡುತ್ತಿದ್ದಾರೆ’ ಎಂದರು.ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮಾತನಾಡಿ, ‘ದೇಶದಲ್ಲಿ 1 ಕೋಟಿ ಜನರಿಗೆ ರಕ್ತದ ಅವಶ್ಯವಿದೆ. ಇದರಲ್ಲಿ 60 ಲಕ್ಷ ಜನರಿಗೆ ಮಾತ್ರ ರಕ್ತ ಲಭಿಸುತ್ತಿದೆ. ಇನ್ನು 40 ಲಕ್ಷ ಜನ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ’ ಎಂದು ಹೇಳಿದರು.‘ರಕ್ತ ನೀಡುವುದರಿಂದ ಮನುಷ್ಯನ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾ ಗುತ್ತದೆ. ಇದರಿಂದ ವ್ಯಕ್ತಿ ಚೈತನ್ಯ, ಲವಲ ವಿಕೆಯಿಂದ ಕೂಡಿರುತ್ತಾರೆ. ದೇಹವೂ ಆರೋಗ್ಯವಾಗಿರುತ್ತದೆ. ಯಾವುದೇ ರೋಗ ಬರುವುದಿಲ್ಲ’ ಎಂದು ಹೇಳಿದರು.‘ಪೊಲೀಸ್ ಇಲಾಖೆ ಸಿಬ್ಬಂದಿ ಪ್ರತಿವರ್ಷ ರಕ್ತದಾನ ಮಾಡುತ್ತಿದ್ದಾರೆ. ಒಂದು ಬಾಟಲ್ ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಬಹುದು. ಜಿಲ್ಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಲವು ಶಿಬಿರಗಳನ್ನು ಈಗಾಗಲೇ ಯಶಸ್ವಿಯಾಗಿ ಸಂಘಟಸಿದೆ’ ಎಂದರು.‘ಪುರುಷರು ವರ್ಷಕ್ಕೆ 4 ಬಾರಿ ರಕ್ತದಾನ ಮಾಡಬಹುದು. ಮಹಿಳೆ ಯರು 3 ಬಾರಿ ರಕ್ತ ನೀಡಬಹುದು. ಇದರಿಂದ ಅಡ್ಡಪರಿಣಾಮಗಳಿಲ್ಲ. ಕಳೆದ ಬಾರಿ ರಕ್ತದಾನ ಶಿಬಿರದಲ್ಲಿ 500 ಯುನಿಟ್ ರಕ್ತ ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿತ್ತು’ ಎಂದರು.ಎ.ಎಸ್‌.ಪಿ ಜಯಪ್ರಕಾಶ, ಡಿ.ಎಸ್.ಪಿ ನಾಗರಾಜ ಒಂಟಿ, ಅರವಿಂದ ಗೋಟೂರ, ಮೊಹನಕುಮಾರ ರಂಜೋಳಕರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಪೊಲೀಸ್ ಪೇದೆ ಶಶಿಕಾಂತ ರಾಠೋಡ, ವೈದ್ಯೆ ಶಾಲಿನಿ ರಂಜನಶೆಟ್ಟಿ, ಕಾರ್ಯಕ್ರಮದ ಸಂಯೋಜಕ ಸಿದ್ರಾಮಪ್ಪ ಬಮನಾಳಕರ ಇದ್ದರು. ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.