ಭಾನುವಾರ, ಮಾರ್ಚ್ 7, 2021
22 °C
ವಿಭಾಗ ಮಟ್ಟದ ಪಶುವೈದ್ಯರ ತಾಂತ್ರಿಕ ಸಮ್ಮೇಳನ ಆರಂಭ

ಜಾನುವಾರು ರಕ್ಷಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನುವಾರು ರಕ್ಷಣೆಗೆ ಸಲಹೆ

ಕಲಬುರ್ಗಿ: ಜನುವಾರುಗಳು ಜಂತು ಬಾಧೆಗೆ ಈಡಾಗದಂತೆ ನಿಯಂತ್ರಣ ಮಾಡಿ, ಅವುಗಳನ್ನು ಸಂರಕ್ಷಿಸಲು ಎಲ್ಲರೂ ಬದ್ಧರಾಗಬೇಕು ಎಂದು ಪಶು ಪಾಲನಾ ಮತ್ತು ಪಶುವೈದ್ಯ ಇಲಾಖೆಯ ರೋಗ ಅಧ್ಯಯನ ವಿಭಾಗದ ಜಂಟಿ ನಿರ್ದೇಶಕ ಡಾ. ಎಂ.ಟಿ. ಮಂಜುನಾಥ ಹೇಳಿದರು.ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರದಿಂದ ಆರಂಭವಾದ ಎರಡು ದಿನಗಳ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಭಾಗ ಮಟ್ಟದ ಪಶುವೈದ್ಯರ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಜಂತುಬಾಧೆ ನಿಯಂತ್ರಣ ಕ್ಕಾಗಿ ಮಾದರಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಪರೀಕ್ಷೆ ನಡೆಸಿದ ನಂತರ ಜಂತುಬಾಧೆ ಎಷ್ಟು ಪ್ರಮಾಣದಲ್ಲಿದೆ ಎಂಬುದು ಗೊತ್ತಾಗಲಿದೆ. ಈಗಾಗಲೇ ರಾಜ್ಯದ 100 ಪಶು ವೈದ್ಯರಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಜಾನುವಾರುಗಳ ರೋಗ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಶೇ 75ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 25ರಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ ಎಂದರು.ತುಮಕೂರು, ಮೈಸೂರು ಹಾಗೂ ಧಾರವಾಡಗಳಲ್ಲಿ ಈಗಾಗಲೇ ವಿಭಾ ಗೀಯ ಮಟ್ಟದ ಸಮ್ಮೇಳನ ನಡೆದಿವೆ. ಕಲಬುರ್ಗಿ ನಂತರ ರಾಜ್ಯ ಮಟ್ಟದಲ್ಲಿ ಎರಡು ವಿಚಾರ ಸಂಕಿರಣ ನಡೆಸಿ ಜಾನುವಾರು ಆರೋಗ್ಯ ಸಮಸ್ಯೆ ಬಗೆ ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದರು.ಡಾ. ವಿವೇಕ, ಡಾ. ವಿಜಯ ಕುಮಾರ, ಡಾ. ಕೆ.ಎಲ್. ಕುಮಾರ, ಡಾ. ಸೋಮಶೇಖರ, ಡಾ. ಗೋವಿಂದ, ಡಾ. ಶಿವಶರಣಪ್ಪ ಯಲಗೋಡ, ಡಾ. ಪ್ರಕಾಶ ರಾಠೋಡ, ಡಾ. ಶಂಕರ ಕಣ್ಣಿ, ಡಾ. ಶಿವಪ್ರಸಾದ, ಡಾ. ಅಲ್ತಾ- ಸೇರಿದಂತೆ ಕಲಬುರ್ಗಿ ವಿಭಾಗದ ಉಪ ನಿರ್ದೇಶಕರು ಇದ್ದರು.ಡಾ. ಭದ್ರಿ ಪ್ರಸಾದ ದೇಶಪಾಂಡೆ ನಿರೂಪಿಸಿದರು. ಕಲಬುರ್ಗಿ ಪಶು ಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ. ಡಿ.ಎನ್. ಕರಲಗಿಕರ್ ಸ್ವಾಗತಿಸಿದರು. ತಾಂತ್ರಿಕ ವಿಚಾರ ಸಂಕಿರಣ ಕುರಿತ ಕೃತಿ ಬಿಡುಗಡೆ ಮಾಡಲಾಯಿತು. ಆ ನಂತರ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಬಂಧಗಳನ್ನು ಮಂಡಿಸಿದರು.ಜಾನುವಾರು ಸಂಪತ್ತು ಅಭಿವೃದ್ಧಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.  ಇದರಿಂದ ದೇಶದಲ್ಲಿ ಹಾಲಿನ ಹೊಳೆ ಹರಿಸಬಹುದು.

ಡಾ. ಬಿ.ಎಸ್. ಜಂಬಗಿ

ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ವಿಭಾಗೀಯ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.