ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಕೊಕ್!

ಸೋಮವಾರ, ಜೂಲೈ 22, 2019
27 °C

ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಕೊಕ್!

Published:
Updated:

ಚಿಂಚೋಳಿ: ತಾಲ್ಲೂಕಿನ ಹರಸಗುಂಡಗಿ, ಗುರಂಪಳ್ಳಿ ಹಾಗೂ ಮರಪಳ್ಳಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ಜಲ ನಿರ್ಮಲ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರು ಪತ್ತೆಯಾಗಿರುವುದು ಕಂಡು ಬಂದಿದೆ.ಶಾಸಕ ಸುನೀಲ ವಲ್ಯ್‌ಪುರ ಅವರು, ಶನಿವಾರ ಶಿಲಾನ್ಯಾಸ ನೆರವೇರಿಸಿದ್ದು ಸಮಾರಂಭದ ಆಮಂತ್ರಣ ಪತ್ರಿಕೆ ಹಾಗೂ ಶಿಲಾನ್ಯಾಸ ಫಲಕದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮರಾವ್ ಪಾಟೀಲ್ ಮೋಘಾ, ಉಪಾಧ್ಯಕ್ಷೆ ಅನುಸಾಬಾಯಿ ಪ್ರೇಮಸಿಂಗ್ ಚವ್ಹಾಣ ಅವರ ಹೆಸರು ಮುದ್ರಿಸದಿರುವುದು ಗೋಚರಿಸಿದೆ.ಈ ಇಬ್ಬರು ಧುರೀಣರು ಬಿಜೆಪಿಯವರೇ ಆಗಿದ್ದು, ಶಾಸಕರು ಅದೇ ಪಕ್ಷಕ್ಕೆ ಸೇರಿದ್ದಾರೆ. ಆದರೆ ಅಧಿಕಾರಿಗಳು ತಾ.ಪಂ. ಅಧ್ಯಕ್ಷ ಉಪಾಧ್ಯಕ್ಷರನ್ನು ಮರೆತಿರುವುದು ಏಕೆ ಎಂಬ ಸಂಶಯ ಸಾರ್ವಜನಿಕರನ್ನು ಕಾಡುವಂತಾಗಿದೆ.

ಸರ್ಕಾರಿ ಸಭೆ ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕೆಂಬುದು ಸಾಮಾನ್ಯ ನಿಯಮ ಆದರೆ ತಾ.ಪಂ. ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಕ್ಷೇತ್ರದ ಸಂಸದರ ಹೆಸರು ಕಾಣಿಸಲಿಲ್ಲ. ಈ ಕುರಿತು ಅಧ್ಯಕ್ಷ ರಾಮರಾವ್ ಪಾಟೀಲರನ್ನು ಪ್ರಶ್ನಿಸಿದರೆ ತಾವು ಮೈಸೂರಲ್ಲಿ ತರಬೇತಿಯಲ್ಲಿದ್ದೇನೆ.ಸಮಾರಂಭದ ಆಮಂತ್ರಣ ಪತ್ರಿಕೆಯ ಪ್ರಮಾದದ ಬಗ್ಗೆ ತಮಗೆ ಗೊತ್ತಾಗಿಲ್ಲ ಆದರೆ ಬೆಳಿಗ್ಗೆ ಶಾಸಕರಾದ ಸುನೀಲ ವಲ್ಯ್‌ಪುರ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬರಲು ತಿಳಿಸಿದ್ದರು ಎಂದರು. ಈ ಹಿಂದೆ ತಾಲ್ಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಕಾಂಗ್ರೆಸ್ ವಶದಲ್ಲಿತ್ತು. ಆಗಲೂ ಇಂತಹ ಪ್ರಮಾದ ಆದಾಗ ಅಧಿಕಾರಿಗಳತ್ತ ಬೊಟ್ಟ ಮಾಡಲಾಗಿತ್ತು. ಆದರೆ ಈಗ ಬಿಜೆಪಿ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಪತ್ಯ ಸ್ಥಾಪಿಸಿದ ಮೇಲೂ ಅಧಿಕಾರಿಗಳ ಮನಸ್ಥಿತಿ ಬದಲಾಗದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry