ರೈತರಿಗೆ ಅಂತರ್ಜಾಲ ಕೃಷಿ ಮಾರಾಟ ಮಾಹಿತಿ

ಗುರುವಾರ , ಜೂಲೈ 18, 2019
28 °C

ರೈತರಿಗೆ ಅಂತರ್ಜಾಲ ಕೃಷಿ ಮಾರಾಟ ಮಾಹಿತಿ

Published:
Updated:

ಗುಲ್ಬಗ: ಇಲ್ಲಿನ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವಿಭಾಗೀಯ ಕಾರ್ಯಾಲಯದ ವತಿಯಿಂದ ಯಾದಗಿರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಕೃಷಿ ಮಾರಾಟ ವೆಬ್ ಸೈಟ್ ಕುರಿತು ರೈತರಿಗೆ ಹಾಗೂ ಪೇಟೆ ಕಾರ್ಯಕರ್ತರಿಗೆ ಮಾಹಿತಿ ಸಭೆ ಏರ್ಪಡಿಸಲಾಗಿತ್ತು.ಕೃಷಿ ಮಾರಾಟ ಮಂಡಳಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ ಮಾತನಾಡಿ, ವೆಬ್‌ಸೈಟ್‌ನಲ್ಲಿ ದೈನಂದಿನ ಕೃಷಿ ಉತ್ಪನ್ನಗಳ ಪ್ರಚಲಿತ ಮಾಹಿತಿ ಹಾಗೂ ನೂತನವಾಗಿ ಪ್ರಾರಂಭಗೊಂಡ ಮಾರ್ಕೆಟ್ ಎಸ್.ಎಂ.ಎಸ್. ಯೋಜನೆ ಮೊಬೈಲ್ ಮೂಲಕ ದೈನಂದಿನ ಕೃಷಿ ಉತ್ಪನ್ನಗಳ ಧಾರಣೆ ಮಾಹಿತಿಯನ್ನು ಶೀಘ್ರವಾಗಿ ತಲುಪುವಂತೆ ಪ್ರಾಯೋಗಿಕವಾಗಿ ತೋರಿಸಲಾಯಿತು.ಸದರಿ ಸಭೆಗೆ ಹಾಜಾರಾದ ರೈತರ ಹಾಗೂ ಪೇಟೆಧಾರಣೆ ಮೊಬೈಲ್ ಸಂಖ್ಯೆಗೆ ಮಾರುಕಟ್ಟೆ ಸಂದೇಶ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲಾಯಿತು.

 

ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಸಿದ್ದಪ್ಪ ಎಸ್. ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಪಾಟೀಲ ಬಿಳಾರ, ರವೀಂದ್ರ ರೆಡ್ಡಿ, ಜಿ.ಎಂ.ಲಗುಮಣ್ಣ ಹಾಜರಿದ್ದರು. ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಗೌಡಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry